ಚಿಮ್ಮಡ ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪರಪ್ಪ ಪಾಲಭಾವಿ ಮಾತನಾಡಿದರು. ಸಿಪಿಐ ಸಂಜೀವ ಬಳಗಾರ, ಪಿಎಸ್‌ಐ ಶಾಂತಾ ಹಳ್ಳಿ ಇದ್ದರು. 
ಜಿಲ್ಲೆ

ಚಿಮ್ಮಡದ ಪ್ರಭುಲಿಂಗೇಶ್ವರರ ಕಿಚಡಿ ಜಾತ್ರೆ

ದತ್ತಾತ್ರೇಯ ಪಿ ಕುಲಕರ್ಣಿ

ಚಿಮ್ಮಡ: ಈ ಭಾಗದ ಆರಾಧ್ಯ ದೈವ ಪ್ರಭುಲಿಂಗೇಶ್ವರರ ಕಿಚಡಿ ಜಾತ್ರೆ ಸೆ. 16 ರಂದು ಸೋಮವಾರ ವಿಜೃಂಭಣೆಯಿಂದ ನಡೆಯಲಿದೆ.

ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಬೆಳಗ್ಗೆ 9 ಗಂಟೆಗೆ ಷಟಸ್ಥಲ ಧ್ವಜಾರೋಹಣ ನೆರವೇರಲಿದೆ. ಅದೇ ದಿನ ರಾತ್ರಿ 10 ಗಂಟೆಗೆ ನೂರಾರು ಟ್ರಾೃಕ್ಟರ್‌ಗಳ ಮೂಲಕ ಅಕ್ಕಿ, ಬೇಳೆ, ಮಸಾಲೆ ಸಾಮಗ್ರಿಗಳನ್ನು ಗುಡ್ಡದ ಪ್ರಭುಲಿಂಗೇಶ್ವರ ದೇವಸ್ಥಾನಕ್ಕೆ ಸಾಗಿಸಲಾಗುತ್ತದೆ.

ಸೋಮವಾರ ಬೆಳಗ್ಗೆ 4 ಗಂಟೆಗೆ ಪ್ರಭುಲಿಂಗೇಶ್ವರ ಗದ್ದುಗೆಗೆ ಮಹಾರುದ್ರಾಭಿಷೇಕ, 9 ಕ್ಕೆ ಪಲ್ಲಕ್ಕಿ ಮಹೋತ್ಸವ ಜರುಗಲಿದೆ. 10 ಗಂಟೆಗೆ ಕಿಚಡಿ ಪ್ರಸಾದಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಮಠಗಳ ಮಠಾಧೀಶರು ಪಾಲ್ಗೊಳ್ಳುವರು. ನಂತರ ವಚನ ಚಿಂತನಗೋಷ್ಠಿ ಹಾಗೂ ಜನಪದ ಜಾತ್ರೆ ನಡೆಯಲಿದೆ ಎಂದು ಸ್ಥಳೀಯ ವಿರಕ್ತಮಠದ ಪ್ರಭು ಸ್ವಾಮಿಗಳು ತಿಳಿಸಿದ್ದಾರೆ.

ಸಂಜೆ 7 ಗಂಟೆೆಗೆ ಜೋಡಿ ನಂದಿಕೋಲು ಉತ್ಸವ, ರಾತ್ರಿ ಪ್ರಭುಲಿಂಗೇಶ್ವರ ಯುವಕ ನಾಟ್ಯ ಸಂಘದ ಕಲಾವಿದರು ಕಳ್ಳ ಗುರು ಸುಳ್ಳ ಶಿಷ್ಯ ಹಾಗೂ ಕರಿಸಿದ್ದೇಶ್ವರ ಯುವಕ ನಾಟ್ಯ ಸಂಘದ ಕಲಾವಿದರು ಸಿಡಿದೆದ್ದ ಶಿವಶಕ್ತಿ ನಾಟಕ ಪ್ರದರ್ಶಿಸುವರು. ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಕಿಚಡಿ ಪ್ರಸಾದ ಸ್ವೀಕರಿಸಬೇಕೆಂದು ಪ್ರಭುಲಿಂಗೇಶ್ವರ ಟ್ರಸ್ಟ್ ಸಮಿತಿ ಅಧ್ಯಕ್ಷ ರಾಮಣ್ಣ ಮುಗಳಖೋಡ ಮನವಿ ಮಾಡಿದ್ದಾರೆ.

ಸಿಪಿಐ ಭೇಟಿ: ಗ್ರಾಮದ ಪ್ರಭುಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ವಿವಿಧ ಮಾರ್ಗಗಳನ್ನು ಸ್ವಚ್ಛಗೊಳಿಸಲಾಗಿದೆ. ಬನಹಟ್ಟಿ ಸಿಪಿಐ ಸಂಜೀವ ಬಳಗಾರ, ಪಿಎಸ್‌ಐ ಶಾಂತಾ ಹಳ್ಳಿ, ಸಿಬ್ಬಂದಿ ಬಸವರಾಜ ಹುನ್ನೂರ, ರಾಮಲಿಂಗ ಪೂಜಾರಿ ಭೇಟಿ ನೀಡಿ ಪರಿಶೀಲಿಸಿದರು.

ಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪ ಪೂಜಾರಿ, ಬಾಳಪ್ಪ ಹಳಿಂಗಳಿ, ಅಣ್ಣಪ್ಪಗೌಡ ಪಾಟೀಲ, ರಾಮಪ್ಪ ಬಗನಾಳ, ಗುರಲಿಂಗಪ್ಪ ಪೂಜಾರಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಪರಪ್ಪ ಪಾಲಭಾವಿ, ಬೀರಪ್ಪ ಹಳಮನಿ ಉಪಸ್ಥಿತರಿದ್ದರು.