ಚಿಮ್ಮಡ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಮಾಲಾ ಮೋಟಗಿ, ಉಪಾಧ್ಯಕ್ಷೆ ಪ್ರೇಮಾ ಗೋವಿಂದಗೋಳ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು. ಶಾಸಕ ಸಿದ್ದು ಸವದಿ, ಶಂಕರ ಬಟಕುರ್ಕಿ, ಆನಂದ ಕವಟಿ ಇತರರಿದ್ದರು. 
ಜಿಲ್ಲೆ

ಚಿಮ್ಮಡ ಗ್ರಾಪಂಗೆ ಮಾಲಾ ಅಧ್ಯಕ್ಷೆ, ಪ್ರೇಮಾ ಉಪಾಧ್ಯಕ್ಷೆ

ಚಿಮ್ಮಡ: ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಾಲಾ ಅಶೋಕ ಮೋಟಗಿ, ಉಪಾಧ್ಯಕ್ಷರಾಗಿ ಪ್ರೇಮಾ ಪ್ರಭು ಗೋವಿಂದಗೋಳ ಆಯ್ಕೆಯಾದರು.

28 ಸದಸ್ಯಬಲದ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ 17 ಸದಸ್ಯರು, ಕಾಂಗ್ರೆಸ್ ಬೆಂಬಲಿತ 9 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಆಶಾ ಅಶೋಕ ಧಡೂತಿ ಹಾಗೂ ಮಾಲಾ ಅಶೋಕ ಮೋಟಗಿ, ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ ರವಿ ದೊಡವಾಡ ಹಾಗೂ ಪ್ರೇಮಾ ಪ್ರಭು ಗೋವಿಂದಗೋಳ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ವಿ.ಸಿ.ಬೆಳಗಲ್, ಪಿಡಿಒ ಶಿವಾನಂದ ಬಿರಾದಾರ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಶಾಸಕ ಸಿದ್ದು ಸವದಿ ಸನ್ಮಾನಿಸಿದರು. ಪಿಕೆಪಿಎಸ್ ಅಧ್ಯಕ್ಷ ಶಂಕರ ಬಟಕುರ್ಕಿ, ಗ್ರಾಪಂ ಮಾಜಿ ಅಧ್ಯಕ್ಷ ಆನಂದ ಕವಟಿ, ಗುರುಲಿಂಗಪ್ಪ ಪೂಜಾರಿ, ಪರಪ್ಪ ಪಾಲಭಾವಿ, ವಿಜಯಕುಮಾರ ಪೂಜಾರಿ, ಬಸವರಾಜ ಕುಂಚನೂರ, ಎಪಿಎಂಸಿ ನಿರ್ದೆಶಕ ಪ್ರಭು ಮುಧೋಳ, ಅವ್ವನಪ್ಪ ಮುಗಳಖೋಡ ಇತರರಿದ್ದರು.

ಬನಹಟ್ಟಿ ಪೊಲೀಸ್ ಠಾಣಾಧಿಕಾರಿ ಮಹೇಂದ್ರ ಎಸ್. ಖೋತ್ ಹಾಗೂ ಸಿಬ್ಬಂದಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.