ಪರಶುರಾಮಪುರ: ಐತಿಹಾಸಿಕ ಹಿನ್ನೆಲೆಯುಳ್ಳ ಪವಾಡ ಪುರುಷ ಚಿಲುಮೇರುದ್ರ ಸ್ವಾಮಿ ಸದಾ ಸಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಕಲ ಜೀವಸಂಕುಲಗಳ ರಕ್ಷಕ ಎಂದೇ ಖ್ಯಾತಿ ಗಳಿಸಿದ್ದರು ಎಂದು ಶಾಸಕ ಟಿ.ರಘುಮೂರ್ತಿ ಸ್ಮರಿಸಿದರು.
ನಾಗಗೊಂಡನಹಳ್ಳಿ ವೇದಾವತಿ ನದಿ ದಡದ ಶ್ರೀಗುರು ಚಿಲುಮೆ ರುದ್ರಸ್ವಾಮಿ ಮಠದ ಆವರಣದಲ್ಲಿ ಸೋಮವಾರ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕೃಷಿ ಚಟುವಟಿಕೆಗೆ ಪೂರಕ ಹಾಗೂ ಜನ, ಜಾನುವಾರುಗಳ ಹಿತ ಬಯಸುತ್ತಿದ್ದ ಗುರುಗಳು, ಸಮಾಜದ ಒಳಿತನ್ನೇ ಸದಾ ಬಯಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ದೇವರ ಸ್ಥಾನಕ್ಕೆ ಏರಿದ್ದಾರೆ ಎಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಓಬಳಪ್ಪ ಮಾತನಾಡಿ, ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಜನಪ್ರತಿನಿಧಿಗಳು, ಜನರು ಹೆಚ್ಚು ಸಹಕಾರ ನೀಡಬೇಕು ಎಂದು ಕೋರಿದರು.
ದೇವಸ್ಥಾನ ಸಮಿತಿ ಕಾರ್ಯದರ್ಶಿ ಜೆ.ಎಚ್.ಬೊಮ್ಮಯ್ಯ, ಜಾಜೂರು ಗ್ರಾಪಂ ಅಧ್ಯಕ್ಷೆ ಲೋಕಮ್ಮ ಸುರೇಶ, ಪಗಡಲಬಂಡೆ ಗ್ರಾಪಂ ಅಧ್ಯಕ್ಷ ಕಲ್ಲೇಶಪ್ಪ, ಸದಸ್ಯರಾದ ಸಿದ್ದೇಶ, ಮುಖಂಡರಾದ ಜೆ.ಎಲ್.ಶ್ರೀನಿವಾಸ, ರೈತ ಮುಖಂಡ ಕೆ.ಪಿ.ಭೂತಯ್ಯ, ಉಮಾಮಹೇಶ್ವರಪ್ಪ, ರಾಮಾಂಜಿನೇಯ, ದೇವರಾಜು, ತಿಪ್ಪೇಸ್ವಾಮಿ, ಕೆಂಜಡಿಯಪ್ಪ, ಸುರೇಶ ಇತರರಿದ್ದರು.