ಟಿ.ಬಸಾಪುರ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದರು. 
ಜಿಲ್ಲೆ

ಮೆಣಸಿನಕಾಯಿ ಜಮೀನಿನಲ್ಲಿ ಗಾಂಜಾ ಬೆಳೆ: ಪೊಲೀಸರ ದಾಳಿ, ವ್ಯಕ್ತಿ ಬಂಧನ

ಕಾನಹೊಸಹಳ್ಳಿ: ಸಮೀಪದ ಟಿ.ಬಸಾಪುರ ಗ್ರಾಮದಲ್ಲಿ ಮೆಣಸಿನಕಾಯಿ ಬೆಳೆ ಮಧ್ಯೆ ಗಾಂಜಾ ಬೆಳೆದ ವ್ಯಕ್ತಿಯನ್ನು ಸ್ಥಳೀಯ ಪೊಲೀಸರು ಬುಧವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಪರಶುರಾಮ ಬಂಧಿತ. ಅಲ್ಲದೆ 800 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಹರಪನಹಳ್ಳಿ ವೃತ್ತ ವಿಭಾಗದ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ನೇತೃತ್ವದಲ್ಲಿ ಕಾನಹೊಸಹಳ್ಳಿ ಪಿಎಸ್‌ಐ ನಾಗರಾಜ್ ಮತ್ತು ಸಿಬ್ಬಂದಿ, ಪಿಡಿಒ ಪ್ರಶಾಂತ, ವೈದ್ಯ ವಿಶ್ವನಾಥ ಕಾರ್ಯಾಚರಣೆಯಲ್ಲಿದ್ದರು.