ಜಿಲ್ಲೆ

ಚಿಲ್ಲಹಳ್ಳಿ ಕಾಟಮಹಲಿಂಗೇಶ್ವರ ಜಾತ್ರೆ

Davangere - Desk - Mahesh Babu E

ಹಿರಿಯೂರು: ತಾಲೂಕಿನ ಚಿಲ್ಲಹಳ್ಳಿ ಗ್ರಾಮದಲ್ಲಿ ಸೋಮವಾರ ಕಾಟಮಹಲಿಂಗೇಶ್ವರ ಸ್ವಾಮಿ ಜಾತ್ರೋತ್ಸವ ಧಾರ್ಮಿಕ ಕಾರ್ಯ ವೈಭವದಿಂದ ನೆರವೇರಿತು.

ಉತ್ಸವ ಮೂರ್ತಿಯನ್ನು ಸಮೀಪದ ಕೂಡ್ಲಹಳ್ಳಿ ಸಂಗಮೇಶ್ವರ ಸನ್ನಿಧಿಗೆ ಕರೆದೊಯ್ದು ಸುವರ್ಣಮುಖಿ-ವೇದಾವತಿ ನದಿ ಸಂಗಮ ಸ್ಥಳದಲ್ಲಿ ಗಂಗಾ ಪೂಜೆ ನೆರವೇರಿಸಿದರು.

ಗ್ರಾಮಕ್ಕೆ ವಾಪಾಸಾದ ನಂತರ ಉತ್ಸವ ಮೂರ್ತಿಯನ್ನು ಹೂವಿನ ಪಲ್ಲಕ್ಕಿಯಲ್ಲಿಟ್ಟು ರಾಜಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಜಾತ್ರೋತ್ಸವ ಅಂಗವಾಗಿ ಡೊಳ್ಳುಕುಣಿ, ನಂದಿಕೋಲು, ವೀರಗಾಸೆ ಕುಣಿತ, ಅನ್ನ ಸಂತರ್ಪಣೆ, ತೀರ್ಥ ಪ್ರಸಾದ ವಿನಿಯೋಗ ಇತರ ಧಾರ್ಮಿಕಾರ್ಯ ನೆರವೇರಿದವು.