ಜಿಲ್ಲೆ

ಆಸ್ಪತ್ರೆ ಮಹಿಳಾ ಸಿಬ್ಬಂದಿಗೆ ಸನ್ಮಾನ, ಚಿಲ್ ಗ್ರುಪ್ ನಿಂದ ಮಹಿಳಾ ದಿನಾಚರಣೆ

Dharwada - Basavaraj Idli

ಹುಬ್ಬಳ್ಳಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಚಿಲ್ ವಾಟ್ಸ್ಆ್ಯಪ್ ಗ್ರುಪ್ ವತಿಯಿಂದ ನಗರದ ಚಿಟಗುಪ್ಪಿ ಆಸ್ಪತ್ರೆಯ 54 ಮಹಿಳಾ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಮಾತನಾಡಿ, ಚಿಟುಗುಪ್ಪಿ ಆಸ್ಪತ್ರೆಯಲ್ಲಿ ಶೇ. 90ರಷ್ಟು ಮಹಿಳಾ ಸಿಬ್ಬಂದಿ ಇದ್ದು, ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯ ಮಾಜಿ ಸಿಂಡಿಕೇಟ್ ಸದಸ್ಯ ಸುಭಾಸಸಿಂಗ್ ಜಮಾದಾರ ಮಾತನಾಡಿ, ಚಿಟಗುಪ್ಪಿ ಆಸ್ಪತ್ರೆ ಮಹಾನಗರದ ಬಡವರ ಸಂಜೀವಿನಿಯಾಗಿ ಕೆಲಸ ಮಾಡುತ್ತಿದೆ. ರೋಗಿಗಳಿಗೆ ಉತ್ತಮ ಸೇವೆ ನೀಡುವಲ್ಲಿ ಇಲ್ಲಿನ ಮಹಿಳಾ ಸಿಬ್ಬಂದಿಯ ಪಾತ್ರ ಪ್ರಮುಖವಾಗಿದೆ ಎಂದರು.

ಚಿಟಗುಪ್ಪಿ ಆಸ್ಪತ್ರೆಯ ಡಾ. ಭಾರತಿ ಹಾಗೂ ಸಿಬ್ಬಂದಿ, ಆ್ಯಪ್ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.

ಚಿಲ್ ವಾಟ್ಸ್ ಆ್ಯಪ್ ಗ್ರುಪ್ ಸದಸ್ಯರಾದ ಸಾಮ್ರಾಟ್ ಸಿಂಗ್ ಹಾಗೂ ಮೇಘನಾ ಲೋಡಯಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ರಂಜಿತಾ ಕಲಗೇರಿ ಸ್ವಾಗತಿಸಿದರು. ವಾದಿರಾಜ ಕುಲಕಣಿರ್ ವಂದಿಸಿದರು.