ಜಿಲ್ಲೆ

ಗೋಪಾಲಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಗ್ರಾಮ

ಮೈಸೂರು: ಗೋಪಾಲಪುರ ಗ್ರಾಮ ಪಂಚಾಯಿತಿ, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್‌ಎಚ್‌ಪಿ)ಯಿಂದ ಗೋಪಾಲಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವೇಗೌಡ ಮಾತನಾಡಿ, ಶುದ್ಧ ಕುಡಿಯುವ ನೀರು, ಶೌಚಗೃಹ, ಅಡುಗೆ ಕೊಠಡಿಗಳ ದುರಸ್ತಿ, ಕೂರಲು ಕೊಠಡಿಗಳ ಕೊರತೆ, ಶಾಲೆಗಳಿಗೆ ಬಣ್ಣ ಬಳಿಸುವುದು, ಕಾಂಪೌಂಡ್ ಒಳಗಡೆ ಗಿಡಗಳನ್ನು ಬೆಳೆಸುವುದು, ಛಾವಣಿ ರಿಪೇರಿ, ಶಾಲಾ ಕಾಂಪೌಂಡ್, ಕ್ರೀಡಾ ಸಾಮಗ್ರಿಗಳು, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಗ್ರಾಮದಲ್ಲಿರುವ ಚರಂಡಿಯ ಸಮಸ್ಯೆ ಗೇಟ್ ನಿರ್ಮಿಸುವುದು, ಗ್ರಾಮದಲ್ಲಿ ಕುಡಿತದ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭಾಗ್ಯಾ, ಸದಸ್ಯರಾದ ಕೃಷ್ಣಮೂರ್ತಿ, ಸಿದ್ದಯ್ಯ, ಭಾಗ್ಯಾ, ರಾಜಮ್ಮ, ಮಾದೇವಸ್ವಾಮಿ, ಜಯಮ್ಮ, ಮಾಧುರಿ, ಸಣ್ಣಸ್ವಾಮಿ ನಾಯಕ, ಗುರುಸ್ವಾಮಿ, ಸಣತಾಯಮ್ಮ, ಪವಿತ್ರಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನರಹರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಮಾತಾ, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಸಂಯೋಜಕ ಶಶಿಕುಮಾರ್, ಮಕ್ಕಳ ರಕ್ಷಣಾ ಘಟಕದ ಮಕ್ಕಳ ಸಹಾಯವಾಣಿ 1098ರ ಜಿಲ್ಲಾ ಸಂಯೋಜಕ ರಘು ಇದ್ದರು.