vijayavani folder
ಜಿಲ್ಲೆ

ನ.23ರಿಂದ ಮಕ್ಕಳ ವಚನ ಮೇಳ Vachana

ವಚನ ಜ್ಯೋತಿ ಬಳಗ ಹಾಗೂ ವಚನ ಸಂಸ್ಕೃತಿ ಅಧ್ಯಯನ ಪ್ರಸರಣ ಕೇಂದ್ರದ ಸಹಯೋಗದಲ್ಲಿ 29ನೇ ವಾರ್ಷಿಕ ಮಕ್ಕಳ ವಚನ ಮೇಳವನ್ನು ನ.23ರಿಂದ ನಾಲ್ಕು ದಿನ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು: ವಚನ ಜ್ಯೋತಿ ಬಳಗ ಹಾಗೂ ವಚನ ಸಂಸ್ಕೃತಿ ಅಧ್ಯಯನ ಪ್ರಸರಣ ಕೇಂದ್ರದ ಸಹಯೋಗದಲ್ಲಿ 29ನೇ ವಾರ್ಷಿಕ ಮಕ್ಕಳ ವಚನ ಮೇಳವನ್ನು ನ.23ರಿಂದ ನಾಲ್ಕು ದಿನ ಹಮ್ಮಿಕೊಳ್ಳಲಾಗಿದೆ.

ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ 12 ಪ್ರಕಾರಗಳ ವಚನ ಸ್ಪರ್ಧೆಗಳು ನಡೆಯಲಿದೆ. ಶಿಶುವಿಹಾರ, ಪೂರ್ವ ಪ್ರಾಥಮಿಕ ಹಂತದಿಂದ 10ನೇ ತರಗತಿವರೆಗಿನ ಮಕ್ಕಳು ಪಾಲ್ಗೊಳ್ಳಬಹುದು.

23ರಂದು ಬೆಳಗ್ಗೆ 9ಕ್ಕೆ ವಚನ ಪ್ರಬಂಧ, ಸಮೂಹ ವಚನ ಗಾಯನ, ವಚನ ಗಾಯನ, 24ರಂದು ಬೆಳಗ್ಗೆ 9ಕ್ಕೆ ಸಮೂಹ ವಚನ ನೃತ್ಯ, ವಚನ ವಿವೇಚನೆ, ವಚನ ಕಂಠಪಾಠ, 25ರಂದು ಬೆಳಗ್ಗೆ 9ಕ್ಕೆ ವಚನ ಚಿತ್ರ, ರೂಪಕ, ಕೆ, ಅಂತ್ಯಾಕ್ಷರಿ, ರಸಪ್ರಶ್ನೆ ಹಾಗೂ 26ರಂದು ಬೆಳಗ್ಗೆ 9ಕ್ಕೆ ವಚನ ವೇಷಭೂಷಣ ಸ್ಪರ್ಧೆಗಳು ನಡೆಯಲಿದೆ. ಭಾಗವಹಿಸುವ ವಿದ್ಯಾರ್ಥಿಗಳು ಶಾಲೆ, ಗೂಗಲ್ ಫಾರಂ ಮೂಲಕ 15ರೊಳಗೆ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ದೂ: 98451 84268 ಸಂಪರ್ಕಿಸಿ.