ಹುಬ್ಬಳ್ಳಿ: ಇಲ್ಲಿಯ ಕೇಶ್ವಾಪುರದ ಸೇವಾ ಸದನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಆಯೋಜಿಸಿದ್ದ ಮಕ್ಕಳ ವಸಂತ ಶಿಬಿರ ಭಾನುವಾರ ಸಂಪನ್ನಗೊಂಡಿತು. ಶಿಬಿರದಲ್ಲಿ 45ಕ್ಕೂ ಹೆಚ್ಚು ಶಿಕ್ಷಣಾರ್ಥಿಗಳು ಪಾಲ್ಗೊಂಡು ಪ್ರಯೋಜನ ಪಡೆದರು.
ಶಿಬಿರ ಸಂಚಾಲಕಿ ಸ್ನೇಹ ಬಡಗಿ, ಮುಖ್ಯ ಶಿಕ್ಷಕಿ ರಶ್ಮಿ ಬಳ್ಳೂರ, ವಕ್ತಾರೆ ಜಯಶ್ರೀ ಪಾವಟೆ, ವಿಜಯಾ ದೀಕ್ಷಿತ್, ಜಿಲ್ಲಾ ಸಂಚಾಲಕರಾದ ಗೋಪಾಲಕೃಷ್ಣ ಜೋಶಿ, ಅಮರಾವತಿ ಗಾಣಗಿ, ಸುಧಾಕರ ಇತರರು ಇದ್ದರು.