ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಶಾಲಾಹಂತದಲ್ಲಿ ಶಿಕ್ಷಣದ ಜತೆಯಲ್ಲಿ ಮಕ್ಕಳಿಗೆ ವ್ಯಾವಹಾರಿಕ ಜ್ಞಾನ ನೀಡುವ ಉದ್ದೇಶದಿಂದ ಮಕ್ಕಳ ಸಂತೆ ಸಹಕಾರಿ ಎಂದು ಗ್ರಾಪಂ ಅಧ್ಯಕ್ಷ ಜನಾರ್ದನರೆಡ್ಡಿ ಹೇಳಿದರು.
ಸೂಲಿಬೆಲೆ ಸೀಬರ್ಡ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಮಾನವಾದ ಅವಕಾಶ ನೀಡಬೇಕು, ಪಠ್ಯ ಮತ್ತು ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ, ವ್ಯಾವಹಕಾರಿಕ ಕಲಿಕೆ ಅವಶ್ಯ ಶಾಲಾಮಟ್ಟದಲ್ಲಿ ಕಲಿಕೆಗೆ ಪೂರಕವಾದ ಇಂತಹ ಕಾರ್ಯಕ್ರಮಗಳು ಭವಿಷ್ಯದಲ್ಲಿ ಮಕ್ಕಳಿಗೆ ಅನುಕೂಲವಾಗಲಿವೆ ಎಂದರು.
ಶಾಲಾ ಅಧ್ಯಕ್ಷೆ ಅಮೀನಾ ಮಾತನಾಡಿ, ಮಕ್ಕಳ ಸಂತೆಯಲ್ಲಿ ತರಕಾರಿ, ಸಿಹಿ ತಿಂಡಿ, ದಿನಸಿ, ಕಟ್ಟಡ ನಿರ್ಮಾಣದ ಪರಿಕರ ಒಳಗೊಂಡಂತೆ ಎಲ್ಲ ಬಗೆಯ ಅಂಗಡಿಗಳನ್ನು ತೆರೆದು, ವಹಿವಾಟು ನಡೆಸಿದ್ದು, ಇದರಿಂದ ಮಕ್ಕಳಲ್ಲಿ ವ್ಯಾಪಾರದ ಪರಿಕಲ್ಪನೆ ಬೆಳೆಯುತ್ತದೆ ಎಂದರು.
ಸ್ಟೇಟ್ ಬ್ಯಾಂಕ್ ಇಂಡಿಯಾ ವ್ಯವಸ್ಥಾಪಕ ಬಾಲು, ಮುಖ್ಯಶಿಕ್ಷಕಿ ಮಂಜುಳ, ಮುಖಂಡರಾದ ಜಿಯಾವುಲ್ಲಾ, ಮುನೀರ್ ಇತರರು ಇದ್ದರು.