ಯಲಬುರ್ಗಾ ಎಸ್.ಎ.ನಿಂಗೋಜಿ ಬಿ.ಇಡಿ.ಕಾಲೇಜಿನಲ್ಲಿ ಶಿಕ್ಷಕರ ದಿನ ಕಾರ್ಯಕವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಲಾಯಿತು. ಮಾಜಿ ಕಸಾಪ ಜಿಲ್ಲಾ ಅಧ್ಯಕ್ಷ ವೀರಣ್ಣ ನಿಂಗೋಜಿ, ನಿವೃತ್ತ ಮುಖ್ಯಶಿಕ್ಷಕ ದ್ಯಾಮಣ್ಣ ಮುಗಳಿ, ಶಿಕ್ಷಕ ಬಸವರಾಜ ಕೊಂಡಗುರಿ, ಪ್ರಾಚಾರ್ಯ ಡಾ.ಪ್ರಕಾಶ, ಪ್ರಾಧ್ಯಾಪಕರಾದ ವಿರೂಪಾಕ್ಷಪ್ಪ ಪತ್ತಾರ, ಮನಾಗರಾಜ ಭಾನಾಪುರ, ವೀರೇಶ್ ಹೊನ್ನೂರ, ದಿನೇಶ, ಬಸವರಾಜ ಇತರರಿದ್ದರು. 
ಜಿಲ್ಲೆ

ಮಕ್ಕಳ ಮನಸು ಅರಿತು ಬೋಧಿಸಲಿ

Kopala - Desk - Eraveni

ಯಲಬುರ್ಗಾ: ಶಿಕ್ಷಕರು ಅಧ್ಯಯನ ಶೀಲರಾಗಿರುವ ಜತೆಗೆ ಕರ್ತವ್ಯ ಪ್ರಜ್ಞೆ ರೂಢಿಸಿಕೊಳ್ಳಬೇಕು. ಶಿಕ್ಷಕ, ವಿದ್ಯಾರ್ಥಿಗಳು ಸೇರಿ ಶಿಕ್ಷಣಕ್ಕೆ ಒಂದು ಅರ್ಥ ಬರುವಂತೆ ಮಾಡಬೇಕು ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ ಹೇಳಿದರು.

ಪಟ್ಟಣದ ಎಸ್.ಎ.ನಿಂಗೋಜಿ ಬಿ.ಇಡಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದಿನ ಕಾಲದಲ್ಲಿ ಅನೇಕ ಕೊರತೆ ನಡೆವೆಯೂ ಉತ್ತಮ ಶಿಕ್ಷಣ ಪಡೆದು ಬದುಕು ಕಟ್ಟಿಕೊಂಡವರು ಬಹಳಷ್ಟು ಜನರಿದ್ದಾರೆ. ಅಂತಹವರ ಆದರ್ಶಗಳು ಯುವಕರಿಗೆ ಮಾರ್ಗದರ್ಶನ ನೀಡಲಿವೆ. ಮಕ್ಕಳ ಮನಪರಿವರ್ತನೆ ಆಗಬೇಕಾದರೆ ಅವರ ಮನಸು ಅರಿತು ಬೋಧಿಸಬೇಕು. ಉತ್ತಮ ಪ್ರಜೆಗಳನ್ನು ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದರು.

ನಿವೃತ್ತ ಮುಖ್ಯಶಿಕ್ಷಕ ದ್ಯಾಮಣ್ಣ ಮುಗಳಿ ಮಾತನಾಡಿದರು. ಶಿಕ್ಷಕ ಬಸವರಾಜ ಕೊಂಡಗುರಿ ಉಪನ್ಯಾಸ ನೀಡಿದರು. ಪ್ರಾಚಾರ್ಯ ಡಾ.ಪ್ರಕಾಶ, ಪ್ರಾಧ್ಯಾಪಕರಾದ ವಿರೂಪಾಕ್ಷಪ್ಪ ಪತ್ತಾರ, ಮನಾಗರಾಜ ಭಾನಾಪುರ, ವೀರೇಶ್ ಹೊನ್ನೂರ, ದಿನೇಶ, ಬಸವರಾಜ ಇತರರಿದ್ದರು.