ಸಂಡೂರು ತಾಲೂಕು ತೋರಣಗಲ್ ಎಚ್‌ಎಲ್‌ಸಿ ಕಾಲುವೆ ಪಕ್ಕದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆಯಲ್ಲಿ ವಿವಿಧ ವೇಷಭೂಷಣ ಧರಿಸಿದ್ದ ಮಕ್ಕಳೊಂದಿಗೆ ಜಿಂದಾಲ್ ಅಸೋಸಿಯೇಟ್‌ಡ್ ವೈಸ್ ಪ್ರೇಸೆಡೆಂಟ್ ಭುವನೇಶ್ವರಿ ಮುರುಗನ್ ಸಂಭ್ರಮ ಪಟ್ಟರು. 
ಜಿಲ್ಲೆ

ಮಕ್ಕಳ ಕಲಿಕೆಗೆ ಬಾಲವಾಡಿ ಸಹಕಾರಿ

ಸಂಡೂರು; ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅಂಗನವಾಡಿ (ಬಾಲವಾಡಿ) ಕೇಂದ್ರಗಳು ಸಹಕಾರಿಯಾಗಿವೆ ಎಂದು ಜಿಂದಾಲ್ ಅಸೋಸಿಯೇಟ್‌ಡ್ ವೈಸ್ ಪ್ರೇಸೆಡೆಂಟ್ ಭುವನೇಶ್ವರಿ ಮುರುಗನ್ ಮಂಗಳವಾರ ಹೇಳಿದರು.

ಸಂಡೂರು ತಾಲೂಕು ತೋರಣಗಲ್ ಎಚ್‌ಎಲ್‌ಸಿ ಕಾಲುವೆ ಪಕ್ಕದ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳ ಏಳಿಗೆಗಾಗಿ ನಿರಂತರವಾಗಿ ಕಳೆದ 25ವರ್ಷಗಳಿಂದ ಶ್ರಮಿಸುತ್ತಿರುವ ಪಾಲಕರಿಗೂ ಹಾಗೂ ಶಿಕ್ಷಕರ ಕಾರ್ಯ ಅಭಿನಂದನಾರ್ಹ. ಜೆಎಸ್‌ಡಬ್ಲೂೃ ಫೌಂಡೇಶನ್ ಸ್ಥಾಪಿಸಿರುವ ಅಂಗನವಾಡಿಗಳಿಂದ ವಾರ್ಷಿಕವಾಗಿ 150 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರತಿ ಮಕ್ಕಳು ಶಿಕ್ಷಣವಂತರಾಗಬೇಕು ಎಂಬುದು ನಮ್ಮ ಬಯಕೆ ಮತ್ತು ಸಂಕಲ್ಪ ಎಂದರು.

ಮಕ್ಕಳ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು. ಜೆಎಸ್‌ಡಬ್ಲ್ಯೂ ಫೌಂಡೇಷನ್‌ನ ವ್ಯವಸ್ಥಾಪಕ ರಾಜಶೇಖರ್ ಇತರರಿದ್ದರು.