ಕುಂಬಾರಹಳ್ಳ ಸರ್ಕಾರಿ ಪ್ರೌಢಶಾಲೆ ಶಿಕ್ಷಕರು ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಪಾಲಕರ ಜತೆ ಚರ್ಚಿಸಿದರು. ಮುಖ್ಯಶಿಕ್ಷಕ ನಾರಾಯಣ ಶಾಸ್ತ್ರಿ, ವರ್ಗ ಶಿಕ್ಷಕ ಸಂಗನಬಸವ ಉಟಗಿ, ಸಂಜೀವ ಝಂಬುರೆ, ಬಾಹುಬಲಿ ಮುತ್ತೂರ ಇದ್ದರು. 
ಜಿಲ್ಲೆ

ಮಕ್ಕಳ ಮನೆ, ಮನೆಗೆ ಶಿಕ್ಷಕರ ಭೇಟಿ

ಗಿರೀಶ ಸಗರ

ಚಿಕ್ಕಪಡಸಲಗಿ: ಎಸ್‌ಎಸ್‌ಎಲ್ಸಿ ಪರೀಕ್ಷೆ ಸುಧಾರಣೆಗೆ ಕುಂಬಾರಹಳ್ಳ ಗ್ರಾಮದ ಮಕ್ಕಳು ಮತ್ತು ಪಾಲಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕರು ರಾತ್ರಿ ವೇಳೆ ಮನೆ, ಮನೆಗೆ ಭೇಟಿ ನೀಡಿದರು.

ಮಕ್ಕಳ ಅಭ್ಯಾಸದ ಪ್ರಗತಿ ಕುರಿತು, ಕುಂದುಕೊರತೆ ಕುರಿತು ಪಾಲಕರ ಜತೆ ಸಂವಾದ ನಡೆಸಿದರು. ಶಾಲೆಯಲ್ಲಿ ನಡೆಸಿದ ಪ್ರಥಮ ರೂಪಣಾತ್ಮಕ ಪರೀಕ್ಷೆ ಮಾಹಿತಿ ನೀಡಿದರು.

ಪ್ರತಿಯೊಂದು ವಿಷಯದ ಪ್ರಗತಿ ಕುರಿತು ಪಾಲಕರ ಜತೆ ಸಮಾಲೋಚಿಸಿ ಕೈಗೊಳ್ಳಬೇಕಾದ ಕ್ರಮದ ಕುರಿತು ಶಿಕ್ಷಕರು ತಿಳಿಹೇಳಿದರು.

ಶಿಕ್ಷಣ ಎನ್ನುವುದು ಬಾಲಕ, ಪಾಲಕ, ಶಿಕ್ಷಕರ ತ್ರಿವೇಣಿ ಸಂಗಮವಾಗಿದ್ದು, ಪಾಲಕರು ಸಹ ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಟಿವಿ ನೋಡುವುದನ್ನು ಕಡಿಮೆ ಮಾಡಬೇಕು ಎಂದರು.

ಸತತ ಗೈರಾದ ಮಕ್ಕಳ ಮನೆಗೂ ಭೇಟಿ ನೀಡಿದ ಶಿಕ್ಷಕರು ಸರಿಯಾಗಿ ಶಾಲೆಗೆ ಬರುವಂತೆ ಅವರ ಮನವೊಲಿಸಿದರು.

ಮುಖ್ಯಶಿಕ್ಷಕ ನಾರಾಯಣ ಶಾಸ್ತ್ರಿ, ವರ್ಗ ಶಿಕ್ಷಕ ಸಂಗನಬಸವ ಉಟಗಿ, ಶಿಕ್ಷಕರಾದ ಸಂಜೀವ ಝಂಬುರೆ, ಬಾಹುಬಲಿ ಮುತ್ತೂರ ಅವರು ಹದಿನೈದಕ್ಕೂ ಹೆಚ್ಚಿನ ಮಕ್ಕಳ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.