ಜಿಲ್ಲೆ

ಸುಪ್ರಜ ಶಾಲೆಯಲ್ಲಿ ಮಕ್ಕಳ ಸಂತೆ, ಪಾಲಕರ ಸಭೆ

ಶನಿವಾರಸಂತೆ: ಸ್ಥಳೀಯ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಮಕ್ಕಳ ಸಂತೆ, ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಣೆ ಹಾಗೂ ಪಾಲಕರ ಸಭೆ ಆಯೋಜಿಸಲಾಗಿತ್ತು.


ಶಾಲಾ ಆವರಣದಲ್ಲಿ ಮೂರು ಮತ್ತು ನಾಲ್ಕನೆ ತರಗತಿ ಪುಟಾಣಿಗಳು ಮಕ್ಕಳ ಸಂತೆ ಹಮ್ಮಿಕೊಂಡಿದ್ದರು. ಶಾಲಾ ಮಕ್ಕಳು ತಮ್ಮ ಮನೆಯ ಹೊಲ, ಗದ್ದೆ, ಹಿತ್ತಲು, ತೋಟಗಳಲ್ಲಿ ಬೆಳೆದ ತರಕಾರಿ, ಸೊಪ್ಪು, ಹಣ್ಣು ಹಾಗೂ ಮನೆಯಲ್ಲಿ ತಯಾರಿಸಿದ ತಿಂಡಿ ತಿನಿಸುಗಳನ್ನು ತಂದು ಮಾರಾಟ ಮಾಡಿದರ
ಶಾಲೆಯಲ್ಲಿ ಮಕ್ಕಳ ವ್ಯವಹಾರಿಕ ಜ್ಞಾನ, ಸುಲಭ ಗಣಿತ ಕಲಿಕೆಯ ಆಶಯದಿಂದ ವರ್ಷವಿಡೀ ಬೇರೆ ಬೇರೆ ತರಗತಿಯ ವಿದ್ಯಾರ್ಥಿಗಳಿಗೂ ತಿಂಗಳಿಗೊಮ್ಮೆ ಮಾಸಿಕ ಮಕ್ಕಳ ಸಂತೆಯನ್ನು ಆಯೋಜನೆ ಮಾಡಲಾಗುತ್ತಿದೆ ಹಾಗೂ ಪಾಲಕರು ಮಕ್ಕಳ ಸಂತೆಯಲ್ಲಿ ತರಕಾರಿ, ಹಣ್ಣು ಹಂಪಲುಗಳನ್ನು ಖರೀದಿಸಿ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲೆ ಡಿ.ಸುಜಲಾದೇವಿ ತಿಳಿಸಿದರು


ಪಾಲಕರ ಸಭೆಯನ್ನು ನಡೆಸಿ ವಿದ್ಯಾಸಂಸ್ಥೆಯ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿ ಮತ್ತಿತ್ತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.
ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಣೆ ಮಾಡಲಾಯಿತು. ಶಿಕ್ಷಕರು, ಪಾಲಕರು ಸಭೆಯಲ್ಲಿ ಪಾಲ್ಗೊಂಡಿದ್ದರು.