ಬೈಲಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಹರವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಕುಮಾರ್ ಉದ್ಘಾಟಿಸಿದರು. ಜೈಕುಮಾರ್, ರಾಜಯ್ಯ, ಲಕ್ಕೇಗೌಡ ಇತರರು ಇದ್ದರು.  
ಜಿಲ್ಲೆ

ವ್ಯವಹಾರಿಕ ಜ್ಞಾನ ಸಂಪಾದನೆಗೆ ಮಕ್ಕಳ ಸಂತೆ ಸಹಕಾರಿ

ಬೈಲಕುಪ್ಪೆ: ವಿದ್ಯಾರ್ಥಿಗಳು ವ್ಯವಹಾರಿಕವಾಗಿ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕಾದರೆ ಮಕ್ಕಳ ಸಂತೆ ಉತ್ತಮ ಕಾರ್ಯಕ್ರಮವಾಗಿದೆ ಎಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕುಮಾರ್ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಹರವೆ ಒಂದನೇ ಬ್ಲಾಕ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಕೇವಲ ನಾಲ್ಕು ಗೋಡೆ ಮಧ್ಯೆ ಅಕ್ಷರ ಅಭ್ಯಾಸಕ್ಕಿಂತ ಪ್ರಯೋಗಿಕವಾಗಿ ಅವರ ಜ್ಞಾನಾರ್ಜನೆಯನ್ನು ಉತ್ತಮ ಪಡಿಸಬೇಕಾದರೆ ಇಂತಹ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ. ಸಾಮಾಜಿಕವಾಗಿ ಮಕ್ಕಳಲ್ಲಿ ಪ್ರಬುದ್ಧತೆ ಬೆಳೆಸಲು ಮತ್ತು ವ್ಯವಹಾರದ ಮೂಲಕ ಜೀವನ ನಿರ್ವಹಣೆ ಮಾಡಬಹುದು ಎಂಬ ಪರಿಕಲ್ಪನೆ ಬೆಳೆಸಲು ಹಾಗೂ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಕೂಡುವುದು. ಕಳೆಯುವುದು ಹಾಗೂ ಗುಣಾಕಾರಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಮಗು ಪ್ರಾಯೋಗಿಕವಾಗಿ ಕಾರ್ಯಕ್ರಮದ ಮೂಲಕ ತಿಳಿದುಕೊಳ್ಳುತ್ತದೆ ಎಂದು ತಿಳಿಸಿದರು.

ನಾನಾ ವಸ್ತುಗಳ ಮಾರಾಟ: ವಿದ್ಯಾರ್ಥಿಗಳು ಮಾರಾಟ ಮಾಡುವಂತಹ ತರಕಾರಿ ಹಣ್ಣುಗಳು ತಂಪು ಪಾನೀಯಗಳು ಆಟದ ಸಾಮಾನುಗಳು ಹೀಗೆ ನಾನಾ ರೀತಿಯ ವಸ್ತುಗಳನ್ನು ಸಂತೆಯಲ್ಲಿ ಪ್ರದರ್ಶಿಸಲಾಯಿತು, ಮಕ್ಕಳ ಸಂತೆಯಲ್ಲಿ ಗ್ರಾಮದ ಪಾಲಕರು ವಿದ್ಯಾರ್ಥಿಗಳ ಸಂತೆಯಲ್ಲಿ ಭಾಗವಹಿಸಿ ಹಣದ ವ್ಯವಹಾರವನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ಶಾಲೆಯ ಮುಖ್ಯಶಿಕ್ಷಕ ಜೈ ಕುಮಾರ್. ಗ್ರಾಮದ ಮುಖಂಡರಾದ ರಾಜಯ್ಯ, ಲಕ್ಕೇಗೌಡ. ಶಿಕ್ಷಕ ವೃಂದದವರಾದ ಚೈತ್ರಾ, ಮಂಜು, ಭಾರ್ಗವಿ, ಗಾನವಿ, ಸಹನಾ, ವಿದ್ಯಾರ್ಥಿಗಳಾದ ಸಿಂಚನಾ, ಹರ್ಷಿತಾ, ಸಹನಾ, ಗ್ರಾಮದ ಮಹಿಳೆಯರು ಇದ್ದರು.