ಹುಬ್ಬಳ್ಳಿ: ನಗರದ ಕುಸುಗಲ್ ರೋಡ್‌ನಲ್ಲಿರುವ ಡಾ.ಆರ್.ಬಿ. ಪಾಟೀಲ ಮಹೇಶ ಪದವಿ ಪೂರ್ವ ಕಾಲೇಜ್‌ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಎನ್‌ಎಲ್‌ಇ ಸಂಸ್ಥೆಯಿಂದ ಮಂಗಳವಾರ ಸನ್ಮಾನಿಸಲಾಯಿತು.
ಆಕ್ಸ್‌ಫರ್ಡ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಚೇರ್ಮನ್ ವಸಂತ ಹೊರಟ್ಟಿ ಮಾತನಾಡಿ, ಮಕ್ಕಳ ಪ್ರಯತ್ನಕ್ಕೆ ತಕ್ಕ ಫಲ ದೊರಕಿದೆ. ಹೀಗಂತ ಓದುವ ಹವ್ಯಾಸ ಬಿಡಬಾರದು. ಉನ್ನತ ಗುರಿಯೊಂದಿಗೆ ಓದುವ ಅಭ್ಯಾಸ ಮುಂದುವರಿಸಿಕೊಂಡು ಹೋಗಬೇಕು ಎಂದು ತಿಳಿ ಹೇಳಿದರು.
ಎನ್‌ಎಲ್‌ಇ ಸಂಸ್ಥೆಯ ಉಪಾದ್ಯಾಕ್ಷ ಸುಹಾಸ ಜವಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆ ಹಿಂದೆ ಉಪನ್ಯಾಸಕರ ಕಠಿಣ ಪರಿಶ್ರಮವಿದೆ ಎಂದರು.
ಸಂಸ್ಧೆಯ ಸದಸ್ಯ ಗುರುರಾಜ ಕೌಜಲಗಿ, ಪ್ರಾಚಾರ್ಯರಾದ ರಾಮ್ ಮೋಹನ ಎಚ್.ಕೆ., ರವಿರಾಜ ಶಿದ್ಲಿಂಗ ಮಾತನಾಡಿದರು.
ಉಪನ್ಯಾಸಕರಾದ ಸೌಮ್ಯ ಶಾಂತಗಿರಿ, ಶೋಭಾ ಕೆ., ಓಲಿವಿಯಾ ಫರ್ನಾಂಡೀಸ್, ಶ್ವೇತಾ ದೇಶಪಾಂಡೆ, ಮುತ್ತಪ್ಪ ಚಿಕ್ಕರಾಯರ, ಶ್ರೀಕಾಂತ ಡಿ., ಕಾಲೇಜಿನ ಮಾರ್ಕೆಟಿಂಗ್ ವಿಭಾಗದ ರಾಜಣ್ಣ ಗುಡಿಮನಿ ಉಪಸ್ಥಿತರಿದ್ದರು.