ಕುಂದಾಪುರ: ವಂಡ್ಸೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಾಹಿತ್ಯ ಚಟುವಟಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೂಪಿಸಲಾದ ವಿದ್ಯಾರ್ಥಿಗಳ ಸಾಹಿತ್ಯಿಕ ಡಿಜಿಟಲ್ ಪತ್ರಿಕೆ ಬೆಳಕು ಶುಕ್ರವಾರ ಬಿಡುಗಡೆಗೊಂಡಿತು.
ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಇ-ಪತ್ರಿಕೆ ಬಿಡುಗಡೆಗೊಳಿಸಿದರು. ಪ್ರಾಥಮಿಕ ಶಾಲಾ ಮಟ್ಟದಲ್ಲಿ ರಾಜ್ಯದಲ್ಲೇ ಇದು ಮೊದಲ ಪ್ರಯೋಗವಾಗಿದ್ದು, ವಿದ್ಯಾರ್ಥಿಗಳೇ ಬರೆದ ಸಾಹಿತ್ಯ ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿರಲಿದೆ.
ಎಸ್‌ಡಿಎಂಸಿ ಅಧ್ಯಕ್ಷೆ ಡಾ.ಪೂರ್ಣಿಮಾ ಶೆಟ್ಟಿ, ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ, ಶ್ರೀಧರ್ ಶೆಟ್ಟಿ, ಅನಂದ ಶೆಟ್ಟಿ, ಗೀತಾ ಅವಿನಾಶ್, ಗೋವರ್ಧನ್ ಜೋಗಿ, ಶಶಿಕಲಾ ಎಸ್.ವಂಡ್ಸೆ, ಸತ್ಯನಾ ಕೊಡೇರಿ, ಎಂ.ನಾಗರಾಜ್ ಶೆಟ್ಟಿ, ಗುಂಡು ಪೂಜಾರಿ, ಸಂದೇಶ ಶೆಟ್ಟಿ, ಆಶಾ ಆಚಾರ್ಯ, ರವೀಂದ್ರ ಶೆಟ್ಟಿ, ಪಿಡಿಒ ಪೂರ್ಣಿಮಾ, ರಾಜು, ಮುಖ್ಯಶಿಕ್ಷಕ ಸದಾಶಿವ ಮೊದಲಾದವರು ಉಪಸ್ಥಿತರಿದ್ದರು.