ಜಿಲ್ಲೆ

ರೋಟರಿಯಿಂದ ಮಕ್ಕಳ ದಿನಾಚರಣೆ

ಮಡಿಕೇರಿ:

ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಮಡಿಕೇರಿಯ ರಾಜರಾಜೇಶ್ವರಿ ಶಾಲಾ ಮಕ್ಕಳಿಗೆ ಚಂದ್ರಯಾನ, ರಸ್ತೆ ಸುರಕ್ಷತೆ, ಹಾಗೂ ಪರಿಸರ ಮತ್ತು ಪ್ರಾಣಿಗಳು ಎಂಬ ವಿಷಯದಲ್ಲಿ ಪೆನ್ಸಿಲ್ ಡ್ರಾಯಿಂಗ್ ಸ್ಪರ್ಧೆ ಬುಧವಾರ ನಡೆಸಲಾಯಿತು.

ವಿಜೇತರಿಗೆ ಬಹುಮಾನ ವಿತರಿಸಿದ್ದಲ್ಲದೆ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಚಿತ್ರಕಲೆಗೆ ಸಂಬAಧಿಸಿದ ಪೂರಕ ವಸ್ತುಗಳನ್ನು ನೀಡಲಾಯಿತು. ರೋಟರಿ ಅಧ್ಯಕ್ಷೆ ಗೀತಾಗಿರೀಶ್, ನಿರ್ದೇಶಕಿ ಮೃಣಾಲಿನಿ ಚಿಣ್ಣಪ್ಪ, ಶಾಲಾ ಪ್ರಾಂಶುಪಾಲ ಮಂದಣ್ಣ ಹಾಗೂ ಶಿಕ್ಷಕಿ ದಿವ್ಯಾ ಇದ್ದರು.