ಬೆಂಗಳೂರು: ಓದುವ ಬೆಳಕು ಕಾರ್ಯಕ್ರಮದಡಿ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ನವೆಂಬರ್ 14ರಂದು ‘ಮಕ್ಕಳ ದಿನಾಚರಣೆ’ ಹಾಗೂ 20ರಂದು ಅಂತಾರಾಷ್ಟ್ರೀಯ ಮಕ್ಕಳ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಕ್ಕಳ ಸೃಜನಶೀಲತೆ ಮತ್ತು ಗ್ರಹಿಸುವಿಕೆ ಸಾಮರ್ಥ್ಯವನ್ನು ವೃದ್ಧಿಸಲು ಈ ತಿಂಗಳು ಕಡಲತೀರದ ದೃಶ್ಯ, ಮಾರುಕಟ್ಟೆ, ಜಾತ್ರೆ, ಆಟದ ಮೈದಾನ ಮತ್ತು ಮಕ್ಕಳು ಆನಂದಿಸುವ ಇತರ ಸ್ಥಳಗಳಂತಹ ವರ್ಣರಂಜಿತ ಚಿತ್ರಗಳನ್ನು ಮುದ್ರಿಸಿ ಮಕ್ಕಳಿಗೆ ವಿವರಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಮಕ್ಕಳು ಇಂತಹ ಚಿತ್ರಗಳ ಬಗ್ಗೆ ತಮ್ಮ ಸ್ನೇಹಿತರಿಗೆ ವಿವರಿಸಲು ಅಥವ ಚರ್ಚೆ ನಡೆಸಲು ಹಾಗೂ ಈ ವಸ್ತುವನ್ನು ಇರಿಸಿಕೊಂಡು ಕಥೆಯನ್ನು ರಚಿಸಲು ಉತ್ತೇಜನ ನೀಡಲಾಗುವುದು ಎಂದು ತಿಳಿಸಿದ್ದಾರೆ.