ಕಡಬ: ಪುಣ್ವಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುಟಾಣಿಗಳು ಮಕ್ಕಳ ದಿನಾಚರಣೆಯನ್ನು ಪ್ರಕೃತಿಯ ಜತೆ ಕಳೆಯುವ ಮೂಲಕ ವಿಶಿಷ್ಟವಾಗಿ ಆಚರಿಸಿದರು. ಶಾಲೆಯ ಇಕೋ ಕ್ಲಬ್ ವತಿಯಿಂದ ‘ಪ್ರಕೃತಿಯ ಕಡೆಗೆ ನಮ್ಮ ನಡಿಗೆ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪುಣ್ಚಪ್ಪಾಡಿ ನಡುಮನೆ ಮಕ್ಕಳ ಪಾರ್ಕ್-ಎಎನ್‌ಎಸ್ ಅಮೃತ ಉದ್ಯಾನವನದಿಂದ ನಡಿಗೆ ಪ್ರಾರಂಭಿಸಿ ಕಾರಣಿಕ ಕ್ಷೇತ್ರ ಸವಣೂರು ಜಿನಮಂದಿರ, ಮಕ್ಕಳ ಬಸದಿ, ವಾರದ ಸಂತೆ, ಸವಣೂರಿನ ಹಾಲು ಶೀತಲೀಕರಣ ಕೇಂದ್ರ, ಎಣ್ಣೆ ಗಿರಣಿ, ಅಂಚೆ ಕಚೇರಿ, ಗ್ರಾಮ ಪಂಚಾಯಿತಿ ಕಾರ್ಯಾಲಯ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್, ಸಾರ್ವಜನಿಕ ಡಿಜಿಟಲ್ ಗ್ರಂಥಾಲಯ, ಸವಣೂರು ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ ಮುಂತಾದೆಡೆಗಳಿಗೆ ಭೇಟಿ ನೀಡಿದರು.
ಸವಣೂರು ಗ್ರಾಮ ಪಂಚಾಯಿತಿ ಸದಸ್ಯ ಗಿರಿಶಂಕರ ಸುಲಾಯ, ಶಿಕ್ಷಕಿಯರಾದ ಶೋಭಾ ಕೆ, ಚಂದ್ರಿಕಾ, ತೃಪ್ತಿ, ಸವಿತ ಹಾಗೂ ಪಾಲಕರಾದ ಪೂರ್ಣಿಮಾ, ಸುಹಾಸ್ ಕಾರಂತ್ ಸಹಕರಿಸಿದರು.