ಜಿಲ್ಲೆ

ಮಕ್ಕಳ ದಸರಾ ವಿಜೇತರು

ಮಡಿಕೇರಿ: ಮಡಿಕೇರಿ ನಗರ ದಸರಾ ಸಮಿತಿ, ದಸರಾ ಜನೋತ್ಸವ ಸಾಂಸ್ಕೃತಿಕ ಸಮಿತಿ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಶನಿವಾರ ಮಕ್ಕಳ ಸಂತೆ ನಡೆಯಿತು.

ಮಕ್ಕಳ ಸಂತೆ ಸ್ಪರ್ಧೆಯಲ್ಲಿ ಎಚ್.ಎನ್.ಬೊಳ್ಳಮ್ಮ, ಎ.ಎ.ಬೊಳ್ಳಮ್ಮ, ಚೋಂದಮ್ಮ, ಲೀನಾ ದೇಚಮ್ಮ ತಂಡ ಪ್ರಥಮ, ಎ.ಬಿ.ಶೀತಲ್, ಕೆ.ಪಿ.ಪೂರ್ಣಶ್ರೀ ತಂಡ ದ್ವಿತೀಯ, ಎಂ.ಎಂ.ಮನ್ನಿತ್ ಮತ್ತು ಲಿಪಿಕ ತಂಡ ತೃತೀಯ, ರಕ್ಷಿತ್ ಮತ್ತು ತಾಂಜಿಲ ತಂಡ ಚತುರ್ಥ, ಲಾಸ್ಯ ಮೊನಿಕಾ ಮತ್ತು ಪ್ರೇಕ್ಷಾ ತಂಡ ಐದನೇ ಬಹುಮಾನ ಪಡೆದರು.


ಕ್ಲೇಮಾಡೆಲಿಂಗ್ ಸ್ಪರ್ಧೆಯ ೫ ರಿಂದ ೭ನೇ ತರಗತಿ ವಿಭಾಗದಲ್ಲಿ ಬಿ.ಆರ್.ಸದನ್ ಗೌಡ(ಪ್ರ), ಎಂ.ಎಸ್.ವಿಷ್ಣು(ದ್ವಿ) ಆರ್.ಯಶ್ವಿನ್(ತೃ), ಐ.ಎ.ಸಾಲಿಯಾ ಮತ್ತು ಎಂ.ಎಸ್.ಆಧ್ಯಾ ಸಮದಾನಕರ ಬಹುಮಾನ ಪಡೆದರು. ೮ ರಿಂದ ೧೦ನೇ ತರಗತಿ ವಿಭಾಗದಲ್ಲಿ ಟಿ.ಎಲ್.ಹರ್ಷಿತ್ ಪೊನ್ನಪ್ಪ(ಪ್ರ), ಎಚ್.ಜೆ.ಪವಿನ್(ದ್ವಿ), ಕೆ.ಟಿ.ವನ್ಯ ಕೃಷ್ಣ(ತೃ), ಶಮ್‌ನ ಮತ್ತು ಎಂ.ಶ್ರೇಯಾ ಕೃಷ್ಣ ಸಮದಾನಕರ ಬಹುಮಾನ ಪಡೆದರು.


ಮಕ್ಕಳ ಅಂಗಡಿಮ ಸ್ಪರ್ಧೆಯಲ್ಲಿ: ಸ್ವರ ಅಯ್ಯಪ್ಪ, ದೀತ್ಯ ಕಾವೇರಿ(ಪ್ರ), ಚಿರಂತನ್, ಭುವನ್(ದ್ವಿ), ತ್ರಿಷ್ಯ, ಲೀಕ್ಷಿತ(ತೃ) ಬಹುಮಾನ ಪಡೆದರು. ಮಕ್ಕಳ ಮಂಟಪದಲ್ಲಿ ಟೀಮ್ ವಿವಿ ಕ್ರಿಯೇಟರ್ಸ್(ಪ್ರ) ಕ್ರೇಜಿ ಟೀಮ್(ದ್ವಿ), ಟೀಮ್ ಅಗ್ನಿ(ತೃ), ಟೀಮ್‌೧೪ ಮತ್ತು ಟೀಮ್ ಕರವಲೆಭಗವತಿ ತಂಡ ಸಮಧಾನಕರ ಬಹುಮಾನ ಪಡೆದುಕೊಂಡಿತು. ಛದ್ಮವೇಷ ಸ್ಪರ್ಧೆಯ ಎಲ್‌ಕೆಜಿ ಯುಕೆಜಿ ವಿಭಾಗದಲ್ಲಿ ಪರಂ(ಪ್ರ), ಚಿರಾಗ್(ದ್ವಿ), ಜಗನ್(ತೃ), ೧ ರಿಂದ ೪ನೇ ತರಗತಿ ವಿಭಾಗದಲ್ಲಿ ಎಂ.ವಿ.ದಿವಿತಾ(ಪ್ರ), ಜೆ.ಕೆ.ಅರುಷಿ(ದ್ವಿ), ರಿಶಾ ಪೂಜಾರಿ(ತೃ), ೫ ರಿಂದ ೭ನೇ ತರಗತಿ ವಿಭಾಗದಲ್ಲಿ ವರ್ಷಿತ(ಪ್ರ), ಪಿ.ಎಚ್.ಜನ್ಯ(ದ್ವಿ), ಲೇಖನ(ತೃ) ಬಹುಮಾನ ಪಡೆದರು.


ತೀರ್ಪುಗಾರರು: ಮಕ್ಕಳ ದಸರಾದ ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಮಲ್ಲಿಕಾ, ಶಿರಿನ್, ಸೌಮ್ಯ ನಿರಂಜನ್, ಸವಿತಾ ಪೂವಯ್ಯ, ಮಂಜುನಾಥ್, ಬಿಂದು, ಶಶಿಕಲಾ, ಹೋಮಾ ಪ್ರೀತಂ, ರಶ್ಮಿ ಉತ್ತಪ್ಪ, ಮಮತಾ, ಮಮತಾ ಶಾಸ್ತ್ರೀ, ಸ್ವರನ್, ಶರತ್ ರಘುಪತಿ, ಎಸ್.ಜಿ.ಅಜಯ್, ಎಚ್.ಭರತ್ ಕುಮಾರ್, ವಿಕ್ರಂ ಕಾರ್ಯನಿರ್ವಹಿಸಿದ್ದರು. ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರುಗಳು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಂಟಪ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.