ಧಾರವಾಡ: ಸುಮಾರು 2 ತಿಂಗಳು ಬೇಸಿಗೆ ರಜೆ ಕಳೆದ ಮಕ್ಕಳು ಶುಕ್ರವಾರ ಶಾಲೆಗಳಿಗೆ ಮರಳಿದರು. ರಜಾ ದಿನಗಳಲ್ಲಿ ಕೀಲಿ ಹಾಕಿಕೊಂಡಿದ್ದ ಶಾಲೆಗಳಲ್ಲಿ ತಳಿರು- ತೋರಣದ ಸಿಂಗಾರ ಕಂಡುಬAತು. ಬಿಕೋ ಎನ್ನುತ್ತಿದ್ದ ಮೈದಾನಗಳು, ಶಾಲೆಯ ಆವರಣದಲ್ಲಿ ಮಕ್ಕಳ ಕಲರವ ಕೇಳಿಬಂದಿತು.
ಮಕ್ಕಳು ರಜಾ ದಿನಗಳಲ್ಲಿ ಸಂಬAಽಕರ ಊರು, ಅಜ್ಜ- ಅಜ್ಜಿಯ ಮನೆ ಮತ್ತು ಪ್ರವಾಸ ಕೈಗೊಂಡಿದ್ದರು. ತರಗತಿಯಿಂದ ಬಡ್ತಿ ಪಡೆದು ಮತ್ತೊಂದು ತರಗತಿ ಸೇರುವ ಹುಮ್ಮಸ್ಸು ಮಕ್ಕಳಲ್ಲಿ ಕಂಡುಬAತು. ಮೊದಲ ದಿನ ಶಿಕ್ಷಕರು, ಆಡಳಿತ ಮಂಡಳಿಯವರು ಮಕ್ಕಳನ್ನು ವಿಶಿಷ್ಟವಾಗಿ ಬರಮಾಡಿಕೊಂಡರು. ಪಠ್ಯಪುಸ್ತಕ ಮತ್ತು ಸಿಹಿ ವಿತರಣೆ, ಸರಸ್ವತಿ ಪೂಜೆ ಕಂಡುಬAತು.
ತಿAಗಳುಗಟ್ಟಲೇ ಶಾಲಾ ಗೆಳೆಯರನ್ನು ಬಿಟ್ಟು ದೂರವಿದ್ದ ಮಕ್ಕಳು ಉಭಯ ಕುಶಲೋಪರಿ ವಿಚಾರಿಸಿಕೊಂಡರು. ತಮ್ಮ ಕ್ಲಾಸಿಗೆ ಹೊಸದಾಗಿ ಪ್ರವೇಶಾತಿ ಪಡೆದ ಸಹಪಾಠಿಗಳನ್ನು ಪರಿಚಯ ಮಾಡಿಕೊಂಡರು. ಶಾಲಾ ಬೆಲ್ ಸದ್ದನ್ನು ಮರೆತೇ ಹೋಗಿದ್ದ ವಿದ್ಯಾರ್ಥಿಗಳು, ಸಮಯಕ್ಕೆ ಸರಿಯಾಗಿ ಹಾಜರಾಗಿ ಪಾಠ ಆಲಿಸಿದರು.