ಹನುಮಸಾಗರದಲ್ಲಿ ಹಮ್ಮಿಕೊಂಡ ರಾಜ್ಯ ಎಸ್‌ಎಸ್‌ಕೆ ಸಮುದಾಯದ ಕಾರ್ಯಕ್ರಮಕ್ಕೆ ಅಧ್ಯಕ್ಷ ಡಾ.ಶಶಿಕುಮಾರ ಮೆಹರವಾಡೆ ಚಾಲನೆ ನೀಡಿದರು. ಎಸ್‌ಎಸ್‌ಕೆ ಸಮುದಾಯದ ರಾಜ್ಯ ಕಾರ್ಯದರ್ಶಿ ರಾಮಚಂದ್ರಸಾ ಕಬಾಡಿ, ಹೊಬಳಿ ಅಧ್ಯಕ್ಷ ಭಗೀರಥಸಾ ಪಾಟೀಲ್ ಇತರರಿದ್ದರು. 
ಜಿಲ್ಲೆ

ಮಕ್ಕಳಿಗೆ ಸನಾತನ ಧರ್ಮದ ಮಹತ್ವ ತಿಳಿಸಿ

Kopala - Desk - Eraveni

ಹನುಮಸಾಗರ: ಜಾತಿ ಗಣಿತಿಯಲ್ಲಿ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ನಮೂದಿಸಲಾಗಿದೆ ಎಂದು ಸೋಮವಂಶ ಸಹಾಸ್ರಾರ್ಜುನ ಕ್ಷತ್ರೀಯ (ಎಸ್‌ಎಸ್‌ಕೆ) ಸಮುದಾಯದ ಅಧ್ಯಕ್ಷ ಡಾ.ಶಶಿಕುಮಾರ ಮೇಹರವಾಡೆ ಹೇಳಿದರು.

ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡ ರಾಜ್ಯ ಎಸ್‌ಎಸ್‌ಕೆ ಸಮುದಾಯದ ಪೈಲಟ್ ಯೋಜನೆ, ಜನಗಣತಿ ಕರಡು ಪ್ರತಿಗಳ ಬಿಡುಗಡೆ ಮತ್ತು ಎಸ್‌ಎಸ್‌ಕೆ ಇ-ಸೇವಾ ಕೇಂದ್ರದ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಎಸ್‌ಎಸ್‌ಕೆ ಸಮುದಾಯದವರು ರಾಜ್ಯದಲ್ಲಿ ಸುಮಾರು 10ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಆದರೆ, ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಹೋರಟಿರುವ ಜಾತಿ ಗಣಿತಿಯಲ್ಲಿ ಎಸ್‌ಎಸ್‌ಕೆ ಸಮುದಾಯದವರು 59ಸಾವಿರ ಇದ್ದಾರೆ ಎಂದು ನಮೂದಿಸಿದ್ದಾರೆ. ಇದನ್ನು ಗಮನಿಸಿದರೆ. ರಾಜ್ಯ ಸರ್ಕಾರ ಸಮುದಾಯವನ್ನು ಕಡೆಗಣಿಸುತ್ತಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.

ಮದುವೆ ಆದವರು, ಸೀನಿಯರ್ ಸಿಟಿಜನ್, ಪದವೀಧರರು ಇ-ಸೇವಾ ಕೇಂದ್ರದ ಮೂಲಕ ನಮ್ಮ ದಾಖಲಾತಿಯನ್ನು ದಾಖಲಿಸಿ ಸರ್ಕಾರಕ್ಕೆ ಕೊಡುವುದು ಅವಶ್ಯಕತೆಯಿದೆ. ಸಮುದಾಯದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ಸಮುದಾಯದ ಮಹಿಳೆಯರು ಲಲಿತಾ ಸಹಸ್ರನಾಮ, ಭಗವದ್ಗೀತೆಯನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಮಕ್ಕಳಿಗೂ ಸನಾತನ ಧರ್ಮ ಕಲಿಸಬೇಕು ಎಂದರು.

ಪ್ರಮುಖರಾದ ಕೃಷ್ಣಮೂರ್ತಿ ರಂಗ್ರೇಜ್, ಕೃಷ್ಣಮೂರ್ತಿ ಮೇಹರವಾಡೆ, ಅಶೋಕ ರಾಯಬಾಗಿ, ಡಾ.ಮಾರುತಿಸಾ ರಂಗ್ರೇಜ್, ಸುರೇಂದ್ರಸಾ ರಾಯಬಾಗಿ, ವಿಠ್ಠಲಸಾ ರಾಯಬಾಗಿ, ಶಂಕರಸಾ ರಾಯಬಾಗಿ, ಅಂಬಸಾ ರಂಗ್ರೇಜ್, ತುಳಸಾಬಾಯಿ ಕಾಟವಾ, ಭೀಮಸಾ ದೇವಳೆ, ಜಯಪ್ರಕಾಶ ಕಾಟವಾ, ಆನಂದ ಮೇಹರವಾಡೆ, ಪ್ರವೀಣ ಮೇಹರವಾಡೆ, ರಂಗನಾಥ ಕಠಾರೆ, ರವಿಂದ್ರಸಾ ಕಬಾಡಿ ಇತರರಿದ್ದರು.