ಲಕ್ಷ್ಮೇಶ್ವರದ ಸರ್ಕಾರಿ ಪ್ರೌಢಶಾಲೆಯಲ್ಲಿನ ಮಕ್ಕಳಿಗೆ ಶಾಸಕ ಡಾ. ಚಂದ್ರು ಲಮಾಣಿ ನೋಟ್‌ಬುಕ್ ವಿತರಿಸಿದರು. 
ಜಿಲ್ಲೆ

ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲಿ

ಲಕ್ಷ್ಮೇಶ್ವರ: ಶೈಕ್ಷಣಿಕವಾಗಿ ಎಲ್ಲ ಮಕ್ಕಳು ಸಾಧನೆ ಮಾಡಬೇಕು. ಪ್ರತಿಯೊಬ್ಬರಿಗೂ ಕಲಿಕೆಗೆ ಅವಕಾಶ ಮಾಡಿಕೊಡಬೇಕು. ಅನೇಕ ಮಕ್ಕಳು ಸಮಸ್ಯೆಗಳಿಂದಾಗಿ ಶಿಕ್ಷಣದಿಂದ ವಂಚಿತರಾಗಿರುತ್ತಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದಲ್ಲಿ ಡಾ. ಚಂದ್ರು ಲಮಾಣಿ ಅಭಿಮಾನಿಗಳ ಸಂಘದಿಂದ ಶಾಸಕ ಡಾ. ಚಂದ್ರು ಲಮಾಣಿ ಅವರ ಜನ್ಮದಿನದ ಪ್ರಯುಕ್ತ ತಾಲೂಕಿನ ಸರ್ಕಾರಿ ಹೈಸ್ಕೂಲ್‌ನ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಲೆ ಏರಿಕೆ ಒತ್ತಡದ ನಡುವೆ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ತಂದೆ- ತಾಯಿಗೆ ಸವಾಲಾಗಿದೆ. ಸರ್ಕಾರಿ ಶಾಲೆಗಳಲ್ಲಿರುವ ಮಕ್ಕಳಿಗೆ ಆರ್ಥಿಕ ಸಮಸ್ಯೆ ಇರುವುದರಿಂದ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಯಾವ ಮಗುವೂ ಶಾಲೆಯಿಂದ ಹೊರಗುಳಿಯಬಾರದು ಎನ್ನುವ ಉದ್ದೇಶದಿಂದ ಮಕ್ಕಳಿಗೆ ಅವಶ್ಯವಾದ ನೋಟ್‌ಬುಕ್‌ಗಳನ್ನು ವಿತರಿಸುವ ಕಾರ್ಯವನ್ನು ಮಾಡಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಸರ್ಕಾರಿ ಶಾಲೆಗಳಿಗೆ ಅವಶ್ಯವಾಗಿರುವ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಜನರ ನೋವಿಗೆ ಸ್ಪಂದಿಸುವುದರ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಹೇಳಿದರು.

ವಿಜಯಕುಮಾರ ಹತ್ತಿಕಾಳ ಮಾತನಾಡಿ, ಶೈಕ್ಷಣಿಕವಾಗಿ ಮಕ್ಕಳಿಗೆ ಅನೂಕೂಲ ಕಲ್ಪಿಸುವ ಶಾಸಕರ ಯೋಜನೆ ಸದ್ಬಳಕೆಯಾಗಲಿ ಎಂದು ಹೇಳಿದರು. ಸುನೀಲ ಮಹಾಂತಶೆಟ್ಟರ, ಎಂ.ಆರ್. ಪಾಟೀಲ, ನವೀನ ಬೆಳ್ಳಟ್ಟಿ, ನಿಂಗಪ್ಪ ಬನ್ನಿ, ಶಂಕ್ರಪ್ಪ ಗೊರವರ, ದುಂಡೇಶ ಕೊಟಗಿ, ಗಂಗಾಧರ ಮೆಣಸಿನಕಾಯಿ, ರಮೇಶ ಹಾಳದೋಟದ, ಶಂಕರ ಗೋಡಿ, ರಮೇಶ ದನದಮನಿ, ಗಿರೀಶ ಚೌರಡ್ಡಿ, ಬಸವರಾಜ ಚಕ್ರಸಾಲಿ, ವಿಜಯ ಬೂದಿಹಾಳ, ವಿಶಾಲ ಬಟಗುರ್ಕಿ, ಮುಖ್ಯೋಪಾಧ್ಯಾಯ ಎಂ.ಬಿ. ಹೊಸಮನಿ, ಇತರರಿದ್ದರು.