ಚನ್ನರಾಯಪಟ್ಟಣದ ಆವಿಷ್ಕಾರ ಗೊಬೆಲ್ ಎಜುಕೇಶನ್ ಟ್ರಸ್ಟ್ ನ ಸಿಇಒ ಎನ್.ಎಸ್.ನಾಗರಾಣಿ ಮಾತನಾಡಿದರು. ಶಾಲಿನಿ ವಿಶ್ವನಾಥ್, ಸೌರಭಾ ಇದ್ದರು. 
ಜಿಲ್ಲೆ

ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ಗುಣಮಟ್ಟದಿಂದಿರಲಿ

ಶಿವಶಂಕರ್ ಎಂ. ಹೆಬ್ಬಳ್ಳ

ಚನ್ನರಾಯಪಟ್ಟಣ : ಮಕ್ಕಳನ್ನು ಶೈಕ್ಷಣಿಕವಾಗಿ ಉತ್ತಮ ರೀತಿಯಲ್ಲಿ ಬೆಳೆಸುವ ಜತೆಗೆ ಅವರಿಗೆ ನೈಸರ್ಗಿಕವಾಗಿ ಬೆಳೆಯುವಂತಹ ವಾತಾವರಣ ಕೂಡ ನಿರ್ಮಿಸಬೇಕು ಎಂಬ ಉದ್ದೇಶದಿಂದ ಬೆಂಗಳೂರು ಮೂಲದ ಕೊಲಾರ್ಡ್‌ ಪಬ್ಲಿಕೇಶನ್(ಹೋಲಿ ಕಿಡ್ಸ್) ಸಂಸ್ಥೆ ಪಠ್ಯಕ್ರಮ ರಚಿಸಿದ್ದು, ಆವಿಷ್ಕಾರ ಗ್ಲೋಬಲ್ ಎಜುಕೇಶನ್ ಈ ಪಠ್ಯಕ್ರಮವನ್ನು ಅಳವಡಿಸಿಕೊಂಡಿದೆ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಸ್.ನಾಗರಾಣಿ ತಿಳಿಸಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತದ ಇಸಿಎಎಸ್ ಆಧಾರದ ಮೇಲೆ ಬೆಂಗಳೂರಿನ ಸಂಸ್ಥೆಯಾದ ಕೊಲಾರ್ಡ್‌ ಪಬ್ಲಿಕೇಶನ್(ಹೋಲಿ ಕಿಡ್ಸ್) ಸಂಸ್ಥೆ ವತಿಯಿಂದ ಪಠ್ಯಕ್ರಮ ರಚಿಸಲಾಗಿದ್ದು ಕರ್ನಾಟಕ ರಾಜ್ಯದಲ್ಲಿ 300 ಶಾಲೆಗಳಲ್ಲಿ 30,000 ಮಕ್ಕಳಿಗೆ ಈ ಪಠ್ಯಕ್ರಮ ಮೂಲಕ ಕಲಿಕೆಯನ್ನು ಹೇಳಿಕೊಡುವದಲ್ಲಿ ಯಶಸ್ವಿಯಾಗಿದೆ. ಈ ಸಂಸ್ಥೆ ಚನ್ನರಾಯಪಟ್ಟಣದಲ್ಲಿ ಆವಿಷ್ಕಾರ ಗ್ಲೋಬಲ್ ಎಜುಕೇಶನ್ ತೆರೆದು ಮಕ್ಕಳ ಕಲಿಕೆಗೆ ಉತ್ತಮ ಸೌಲಭ್ಯಗಳ ಜತೆಗೆ ಉತ್ತಮ ವಿದ್ಯಾಭ್ಯಾಸ ನೀಡುತ್ತಿದೆ. ಈಗಿನ ಪಾಲಕರು ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವಲ್ಲಿ ಗಮನ ಹರಿಸಿದರೆ ಮಕ್ಕಳು ಉತ್ತಮ ಭವಿಷ್ಯ ಹೊಂದಿ ದೇಶದ ಅತ್ಯುತ್ತಮ ಪ್ರಜೆಗಳಾಗುತ್ತಾರೆ ಎಂದು ತಿಳಿಸಿದರು.

ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕು ಎನ್ನುವುದು ಪ್ರತಿಯೊಬ್ಬ ಪಾಲಕರ ಇಚ್ಛೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಅದಕ್ಕೆ ತಕ್ಕಂತೆ ಬೆಳೆಸುವುದು ಒಂದು ಸವಾಲಿನ ಕೆಲಸ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ತುಂಬ ಶ್ರಮ ವಹಿಸುತ್ತಾರೆ. ಇದಕ್ಕಾಗಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಶಿಸ್ತು ಮತ್ತು ಮೌಲ್ಯಗಳನ್ನು ನೀಡಬೇಕಾಗುತ್ತದೆ. ಮಕ್ಕಳಲ್ಲಿ ಇರುವಂತಹ ಕೌಶಲ, ಸಾಮರ್ಥ್ಯವು ಹೊರಬರಲು ಬೇಕಾಗುವಂತಹ ವಾತಾವರಣ ನಿರ್ಮಾಣ ಮಾಡಬೇಕಾಗುತ್ತದೆ. ಮಕ್ಕಳನ್ನು ಒಂದು ಆರ್ಥಿಕ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ತಯಾರು ಮಾಡುವ ಬದಲು ಅವರಲ್ಲಿ ಗ್ರಹಿಕೆ ಮತ್ತು ಪ್ರಜ್ಞೆ ಹೆಚ್ಚಿಸುವಂತಹ ಶಿಕ್ಷಣ ನೀಡಬೇಕು ಎಂದರು.

ಮಗುವಿನ ಜೀವಾವಧಿಯಲ್ಲಿ ಆರಂಭಿಕ ವರ್ಷಗಳು ಅತ್ಯಂತ ಅಸಾಧಾರಣ ಬೆಳವಣಿಗೆಯ ಅವಧಿಯಾಗಿದೆ. ಎಲ್ಲ ಕಲಿಕೆಯ ಅಡಿಪಾಯವನ್ನು ಈ ವಿಷಯಗಳಲ್ಲಿ ಹಾಕಲಾಗುತ್ತದೆ. ಉತ್ತಮ ಅಡಿಪಾಯ ಹಾಕುವುದರಿಂದ ಭವಿಷ್ಯದಲ್ಲಿ ದೊಡ್ಡ ಪ್ರಯೋಜನಗಳಿವೆ. ಉತ್ತಮ ಶಾಲೆಯಲ್ಲಿ ಉತ್ತಮ ಕಲಿಕೆ ಮತ್ತು ಉನ್ನತ ಶೈಕ್ಷಣಿಕ ಸಾಧನೆ ಇದು ಸಮಾಜಕ್ಕೆ ಪ್ರಮುಖ ಸಾಮಾಜಿಕ ಮತ್ತು ಆರ್ಥಿಕ ಲಾಭಗಳಿಗೆ ಕಾರಣವಾಗುತ್ತದೆ. ಪೂರ್ವ ಪ್ರಾಥಮಿಕ ಶಿಕ್ಷಣ ಎಲ್ಲ ಕಲಿಕೆಯನ್ನು ಅವಲಂಬಿತವಾಗಿರುತ್ತದೆ ಎಂದರು.

ಪೂರ್ವ ಪ್ರಾಥಮಿಕ ಶಾಲೆಯಿಂದ ಮಕ್ಕಳಿಗೆ ಗುಣಮಟ್ಟದ ಮೂಲ ಕಲಿಕೆ ಸಾಕ್ಷರತೆ ಹಾಗೂ ಸಂಖ್ಯಾತ್ಮಕ ಕೌಶಲ ಅಭಿವೃದ್ಧಿ ಭಾವನಾತ್ಮಕ ಸ್ಥಿತಿಯನ್ನು ಬೆಳೆಸುತ್ತದೆ. ಮಿದುಳಿನ ಬೆಳವಣಿಗೆಗೆ ಸಹಕಾರಿಯಾಗಿ ಗೆಳೆಯರೊಂದಿಗೆ ಸಂಪರ್ಕ ಸಾಧಿಸುವುದು ಸ್ವತಂತ್ರರಾಗಿರುವುದನ್ನು ಕಲಿಯುತ್ತಾರೆ ಹಾಗೂ ಕಲಿಕೆಯ ಮೇಲೆ ಪ್ರೀತಿ ಬೆಳೆಸುತ್ತಾರೆ. ಮಕ್ಕಳು ಚಟುವಟಿಕೆ ಆಧಾರಿತವಾಗಿ ನೋಡಿ ಕಲಿ ಮಾಡಿ ತಿಳಿ ಮೂಲಕ ಕಲಿತರೆ ಶಾಶ್ವತ ಕಲಿಕೆ ಮಕ್ಕಳಲ್ಲಿ ಉಂಟಾಗುತ್ತದೆ ಎಂದರು.

ಆವಿಷ್ಕಾರ ಗ್ಲೋಬಲ್ ಎಜುಕೇಶನ್‌ನ ನಿರ್ದೇಶಕಿ ಶಾಲಿನಿ ವಿಶ್ವನಾಥ್, ಚನ್ನರಾಯಪಟ್ಟಣ ಕೇಂದ್ರದ ಮುಖ್ಯಸ್ಥೆ ಸೌರಭ ಸೇರಿದಂತೆ ಇತರರು ಭಾಗವಹಿಸಿದ್ದರು.