ಜಿಲ್ಲೆ

ಮಕ್ಕಳಿಗೆ ನೈತಿಕ ಮೌಲ್ಯ ಕಲಿಸಿಕೊಡಲಿ

ಮುನವಳ್ಳಿ: ಮೌಲ್ಯಗಳಿಂದ ತುಂಬಿದ ಭಾರತೀಯ ಸಮಾಜ ಅವನತಿಯತ್ತ ಸಾಗುತ್ತಿದೆ. ಹೀಗಾಗಿ ಮಕ್ಕಳಿಗೆ ನೆತಿಕ ಮೌಲ್ಯ ಕಲಿಸಿ ಉತ್ತಮ ನಾಡು ಕಟ್ಟಬೇಕಾಗಿದೆ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

ಪಟ್ಟಣದ ಎಂಎಲ್​ಇಎಸ್​ ಆಂಗ್ಲ ಮಾಧ್ಯಮ ಶಾಲೆಯಲ್ಲಿ 25ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಭಾನುವಾರ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ. ಎಸ್​. ಸಂಗ್ರೇಶಿ ಮಾತನಾಡಿ, ಚುನಾವಣೆಯಲ್ಲಿ ಮತದಾರರು ಆಮಿಷಗಳಿಗೆ ಬಲಿಯಾಗಿ ಓಟಿನ ಪ್ರಾಮುಖ್ಯ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಭ್ರಷ್ಟಾಚಾರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದರು.

ಸಾನ್ನಿಧ್ಯ ವಹಿಸಿದ್ಧ ಸೋಮಶೇಖರಮಠದ ಮುರುಂದ್ರ ಶ್ರೀಗಳು ಮಾತನಾಡಿ, ಪಾಲಕರು ಮಕ್ಕಳ ಶಿಕ್ಷಣಕ್ಕೆ ಸೂಕ್ತ ಪ್ರೋತ್ಸಾಹ ನೀಡಿ ಪ್ರತಿಭೆ ಅನಾವರಣಕ್ಕೆ ಸಹಕರಿಸಬೇಕು ಎಂದರು.

ಸಂಸ್ಥೆಯ ಚೇರ್ಮನ್​ ಉಮೇಶ ಬಾಳಿ ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವದ್ಧಿಗೆ ಉತ್ಸವಗಳು ಪೂರಕವಾಗುತ್ತವೆ ಎಂದರು. ಸಾಂಸತಿಕ ಕಾರ್ಯಕ್ರಮ, ವಚನ ಕಂಠಪಾಠ, ರಾಣಿ ಮಹಾರಾಣಿ, ಮಕ್ಕಳ ಸಂತೆ, ಅಡುಗೆ ಪ್ರದರ್ಶನ, ಗುರುವಂದನೆ ಹಳೇ ವಿದ್ಯಾರ್ಥಿಗಳ ಸಮ್ಮೇಳನ, ಆದರ್ಶ ದಂಪತಿ ಸ್ಪರ್ಧೆ ಯೋಗ ಪ್ರದರ್ಶನ ಮೊದಲಾದವು ಆಕರ್ಷಕವಾಗಿ ನಡೆದವು.

ವಿಶ್ರಾಂತ ಜಿಲ್ಲಾಧಿಕಾರಿ ಜಿ.ವಿ.ಕೊಂಗವಾಡ ಮಾತನಾಡಿದರು. ಸವದತ್ತಿ ಪುರಸಭೆ ಮಾಜಿ ಅಧ್ಯ ಮಹಾಬಳೇಶ್ವರ ಪುರದಗುಡಿ ಅಧ್ಯತೆ ವಹಿಸಿದ್ದರು. ಬೆಮುಲ್​ ನಿರ್ದೇಶಕ ರಮೇಶ ಅಣ್ಣಿಗೇರಿ, ಪಿಎಸ್​ಐ ಹುದ್ದೆಗೆ ಆಯ್ಕೆಯಾದ ಸಂತೋಷ ಪಟ್ಟಣಶೆಟ್ಟಿ, ಆಡಳಿತಾಧಿಕಾರಿ ಎಸ್​.ಆರ್​. ಜಗಾಪೂರ, ಮುಖ್ಯಶಿಕ ಎ.ವಿ.ರೋಣದ, ಶಿಕರಾದ ಎ.ವಿ. ನರಗುಂದ,

ಆರ್​. ಎಸ್​. ಮಲ್ಲಾಪುರಮಠ, ಕಿರಣ ನಾಯ್ಕರ, ಶ್ರೀಶೆಲ ಗೋಪಶೆಟ್ಟಿ, ನಿರ್ಮಲಾ ಗದ್ವಾಲ್​,

ಮಹಾಂತೇಶ ಬಾನಿ ಇತರರಿದ್ದರು.