ಚಿಕ್ಕಮಗಳೂರಿನ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಬಿಎಸ್‌ಎನ್‌ಎಲ್ ೨೫ನೇ ಸಂಸ್ಥಾಪನಾ ದಿನಾಚರಣೆ ಹಾಗು ಹಿಂದಿ ದಿವಸ್ ಕಾರ್ಯಕ್ರಮವನ್ನು ಎಐಟಿ ಕಾಲೇಜು ಪ್ರಚಾರ್ಯ ಡಾ.ಸಿ.ಟಿ.ಜಯದೇವ ಉದ್ಘಾಟಿಸಿದರು. ರಮೇಶ್ ಬೊಂಗಾಳೆ, ಬಾಲಾಜಿ, ಗೋಪಾಲಕೃಷ್ಣ, ಜೋಸೆಫ್, ಚಂದ್ರಹಾಸ ಮತ್ತಿತರರಿದ್ದರು. 
ಜಿಲ್ಲೆ

ಮಕ್ಕಳಿಗೆ ತಾಂತ್ರಿಕ ಜ್ಞಾನ ಸಂಪಾದನೆ ಅವಶ್ಯವಿದೆ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಇಂದಿನ ಕಾಲಕ್ಕೆ ತಾಂತ್ರಿಕ ಕೌಶಲ್ಯತೆ ಮತ್ತು ಜ್ಞಾನ ಸಂಪಾದನೆಯ ಅವಶ್ಯವಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರಂತರ ಶೋಧಿಸುವ ಚಟುವಟಿಕೆಯಲ್ಲಿ ತೊಡಗಬೇಕು ಎಂದು ಎಐಟಿ ಕಾಲೇಜು ಪ್ರಾಚಾರ್ಯ ಡಾ. ಸಿ.ಟಿ.ಜಯದೇವ್ ತಿಳಿಸಿದರು.

ನಗರದ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಬಿಎಸ್‌ಎನ್‌ಎಲ್ ೨೫ನೇ ಸಂಸ್ಥಾಪನಾ ದಿನಾಚರಣೆ ಹಾಗು ಹಿಂದಿ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಟೆಲಿಕಾಂನಲ್ಲಿ ಬಿಎಸ್‌ಎನ್‌ಎಲ್ ಅತ್ಯಂತ ಉನ್ನತ ಹೆಸರನ್ನು ಹೊಂದಿದೆ. ಅನೇಕ ವರ್ಷಗಳಿಂದ ಲ್ಯಾಂಡ್‌ಲೈನ್ ಮುಖಾಂತರ ಜನರ ಪರಸ್ಪರ ಮಾತುಕತೆಗೆ ಹೆಜ್ಜೆಯಿಟ್ಟ ಸಂಸ್ಥೆ. ಇದೀಗ ಗ್ರಾಹಕರಿಗೆ ಇಂಟರ್‌ನೆಟ್ ಸಂಪರ್ಕ ಕಲ್ಪಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಬಿಎಸ್‌ಎನ್‌ಎಲ್ ಸಂಸ್ಥೆ ಡಿಜಿಎಂ ಬಾಲಾಜಿ ಮಾತನಾಡಿ, ತಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ೮೦ ಸ್ಥಳಗಳಲ್ಲಿ ೪ಜಿ ಸೇವೆಯನ್ನು ಆರಂಭಿಸಲಾಗಿದೆ ಹಾಗೂ ಉಳಿದ ೧೬೫ ಸ್ಥಳಗಳಲ್ಲಿ ೪ಜಿ ಸೇವೆಯನ್ನು ಇನ್ನು ಎರೆಡು ತಿಂಗಳಿನಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಹಿಂದಿ ಭಾಷೆಯ ಅವಶ್ಯಕತೆ ಮತ್ತು ಉಪಯುಕ್ತತೆ ಬಗ್ಗೆ ಸಾಹಿತಿ ರಮೇಶ್ ಬೊಂಗಾಳೆ ಅವರು ಉಪನ್ಯಾಸ ನೀಡಿದರು. ಸಂಸ್ಥಾಪನಾ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ಧ ಚಿತ್ರಕಲಾ ಹಾಗೂ ರಸಪ್ರಶ್ನೆ ಭಾಗವಹಿಸಿ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಇದೇ ವೇಳೆ ಬಿಎಸ್‌ಎನ್‌ಎಲ್ ಮತ್ತು ಎ ಐ ಟಿ ಕಾಲೇಜಿನ ನಡುವೆ ಶೈಕ್ಷಣಿಕ ಹಾಗೂ ವ್ಯವಹಾರಿಕ ಒಪ್ಪಂದಕ್ಕೆ ಸಹಿಹಾಕಲಾಯಿತು. ಬಳಿಕ ಡಾ. ಸಿ.ಟಿ.ಜಯದೇವ ಅವರಿಂದ ೪ಜಿ ಸೇವೆಯನ್ನು ಪ್ರಾರಂಭಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬಿಎಸ್‌ಎನ್‌ಎಲ್ ಕಚೇರಿಯಿಂದ ಹಾಲಿ ಹಾಗೂ ನಿವೃತ್ತ ನೌಕರರಿಂದ ನಗರದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್ ಕಚೇರಿಯ ಅಧಿಕಾರಿಗಳಾದ ಎ.ಎನ್.ಗೋಪಾಲಕೃಷ್ಣ, ಜೋಸೆಫ್, ಚಂದ್ರಹಾಸ ಮತ್ತಿತರರಿದ್ದರು.