ಬೆಲಹೊಂಗಲ: ಯುವಜನರು ದುಷ್ಟರಿಂದ ದೂರವಿದ್ದು, ಒಳ್ಳೆಯ ವಿದ್ಯಾಭ್ಯಾಸ ಮಾಡಿದಲ್ಲಿ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಮುರಗೋಡ ಠಾಣೆಯ ಸಿಪಿಐ ಐ.ಎಂ. ಮಠಪತಿ ಹೇಳಿದರು.
ಸಮೀಪದ ಹೊಸೂರ ಗ್ರಾಮದ ಡಾ. ಅಂಬೇಡ್ಕರ್ ಕಾಲನಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್ಸಿ&ಎಸ್ಟಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಮೋಜು&ಮಸ್ತಿಗಾಗಿ ಕಾಲೇಜುಗಳಿಗೆ ತೆರಳುವುದು, ಗುಂಪುಗಾರಿಕೆ, ಮಾದಕ ವ್ಯಸನಿಗಳ ಗೆಳೆತನ ಬೆಳೆಸಿಕೊಂಡು ಯುವಜನರು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಪಾಲಕರು ಮಕ್ಕಳ ಚಲನವಲನ ಗಮನಿಸಿ ಮಾರ್ಗದರ್ಶನ ಮಾಡಬೇಕು. ಇಲ್ಲವಾದರೆ ಮುಂದೊಂದು ದಿನ ಪಾಲಕರನ್ನು ಮನೆಯಿಂದ ಹೊರಹಾಕುವಂತಹ ಸಮಾಜಘಾತುಕ ಕತ್ಯಗಳಲ್ಲಿ ಭಾಗಿಯಾಗುತ್ತಾರೆ ಎಂದರು.
ವಕೀಲ ಎ್.ಎಸ್.ಸಿದ್ದನಗೌಡರ ಮಾತನಾಡಿ, ಸರ್ಕಾರ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಶೆಣಿಕವಾಗಿ ಹೆಚ್ಚಿನ ಪ್ರಾಧಾನ್ಯ ನೀಡುತ್ತಿದ್ದು, ಆರ್ಥಿಕ ಸಹಾಯ ಪಡೆದು ತಮ್ಮ ಭವಿಷ್ಯ ಕಟ್ಟಿಕೊಳ್ಳಬೇಕು. ಶಿಣವೇ ಸರ್ವ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು ಎಂದರು.
ದಲಿತ ಕಾಲನಿಯ ಜನತೆ ತಮ್ಮ ಸಮಸ್ಯೆ ಹೇಳಿಕೊಂಡು ಪರಿಹಾರ ಕಂಡುಕೊಂಡರು.ುಂಡಲೀಕ ಇಂಗಳಗಿ ಮಾತನಾಡಿದರು. ಮುಖ್ಯಮಂತ್ರಿ ಪ್ರಶಸ್ತಿ ವಿಜೇತ ಸಿಪಿಐ ಐ.ಎಂ. ಮಠಪತಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಮಧುಮತಿ ಜುಮೇತ್ರಿ ಅವರನ್ನು ಸತ್ಕರಿಸಲಾಯಿತು.
ಪೊಲೀಸ್ ಸಿಬ್ಬಂದಿಯಾದ ಎ್.ಎಂ. ಮದ್ಲಿ, ಸುರೇಶ ಹುಂಬಿ, ಗ್ರಾಪಂ ಉಪಾಧ್ಯ ಬಸವರಾಜ ಪೆಂಟೇದ, ಗ್ರಾಪಂ ಸದಸ್ಯರಾದ ಅಪ್ಪು ಈಳಿಗೇರ, ಮುಶೆಪ್ಪ ಜಡಿ, ಬಸವ್ವ ಗಾಣಿಗೇರ, ಜಯಶ್ರೀ ಇಂಗಳಗಿ, ಮಡಿವಾಳಪ್ಪ ಕಮತಗಿ, ಮಲ್ಲಿಕಾರ್ಜುನ ಕರಡಿಗುದ್ದಿ, ಸಂಜು ಪಾಟೀಲ, ಸುರೇಶ ಬಾಳೆಕುಂದರಗಿ, ವಕೀಲ ಸಂಜು ಜುಮೇತ್ರಿ, ಅಯ ಗಡ್ಡಿ, ಹಣಮಂತ ಮಲಮೇತ್ರಿ, ಶಂಕರ ಹಿರುನವರ, ಶೋಭಾ ಮಲಮೇತ್ರಿ, ಸುಧಾ ಹಿರುನವರ, ಮನಿಕಂಠ ಮಲಮೇತ್ರಿ ರಾಮಪ್ಪ ಹಿರೂನವರ, ಶಿವಪ್ಪ ಹಿರೂನವರ, ಸುನಂದಾ ಗಡ್ಡಿ ಇತರರಿದ್ದರು.