ಜಿಲ್ಲೆ

ಮಕ್ಕಳು ಮೊಬೈಲ್​ ಬಳಕೆ ತ್ಯಜಿಸಲಿ

ಎಂ.ಎಸ್​.ಹಿರೇಮಠ ಬೆಳಗಾವಿ

ರಾಮದುರ್ಗ: ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸದೆ ಮೊಬೆಲ್​ ಬಳಕೆಯತ್ತ ಹೆಚ್ಚು ಗಮನಹರಿಸಿ ಭವಿಷ್ಯ ಹಾಳುಮಾಡಿಕೊಳ್ಳುವುದರ ಜತೆಗೆ ಆರೋಗ್ಯ ರ್ನಿಲಸುತ್ತಿದ್ದಾರೆ ಎಂದು ಉಡುಪಿಯ ೇತ್ರ ಶಿಣಾಧಿಕಾರಿ ಯಲ್ಲಮ್ಮ ಮರಿಸ್ವಾಮಿ ಹೇಳಿದರು.

ಪಟ್ಟಣದ ನೇತಾಜಿ ಸುಭಾಷ ಚಂದ್ರ ಬೋಸ್​ ಸರ್ಕಾರಿ ಪ್ರೌಢಶಾಲೆಯ 2004&05ನೇ ಸಾಲಿನ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಭಾನುವಾರ ಏರ್ಪಡಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ರ್ನಿದಿಷ್ಟ ಗುರಿಯೊಂದಿಗೆ ಮುನ್ನಡೆದಲ್ಲಿ ಸಾಧನೆ ಸಾಧ್ಯ ಎಂದರು. ಮುಖ್ಯಶಿಕ್ಷಕರಾದ ಪಿ.ಡಿ. ಕಾಲವಾಡ, ಜಿ.ಎಂ.ಹುಲ್ಲೂರ ಮಾತನಾಡಿದರು.

ನಿವತ್ತ ಶಿಕರಾದ ಎಸ್​.ಆರ್​. ಕಂಠೀಕರ, ಎಂ.ಎ. ಪಾಡಮುಖೆ, ಟಿ.ಪಿ ಜಲ್ಲಿಗೇರಿ, ಡಿ.ಎಂ. ಹುಣಸಿಮರದ, ಆರ್​.ಜಿ. ಕುಲಕರ್ಣಿ, ಎ.ವೆ.ಅವತಾಳೆ, ಆರ್​.ಬಿ. ಜಮಖಾನಿ, ಆರ್​.ಬಿ. ಹಿರೇನಿಂಗಪ್ಪನವರ, ಎಂ.ಎಸ್​. ಚಿತ್ತರಗಿ, ಎ.ಡಿ. ದೇಸಾಯಿ, ಐ.ಎ. ಡೋಣಿ, ಎಂ.ಆರ್​. ಹಿರೇಮಠ, ಎಸ್​.ಎಂ. ವಾಲಿ ಅವರನ್ನು ಸನ್ಮಾನಿಸಲಾಯಿತು. ಶಿವು ಗರಡಿಮನಿ, ಕಷ್ಣಾ ಹಾದಿಮನಿ, ರೇಖಾ ಚಿನ್ನಾಕಟ್ಟಿ, ರೂಪಾ ಕಲ್ಲೂರ, ರಾಧಾ ಗಾರಗಿ, ಕಮಲಾ ಬಡಿಗಣ್ಣವರ ಇತರರಿದ್ದರು.