ಸಿಂಧನೂರಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಶಾಸಕ ಹಂಪನಗೌಡ ಬಾದರ್ಲಿ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ಅಕ್ತರ್‌ಪಾಷಾ, ನಗರಸಭೆ ಅಧ್ಯಕ್ಷೆ ಪ್ರಿಯಾಂಕಾ ರೋಹಿತ್‌ಕುಮಾರ, ಉಪಾಧ್ಯಕ್ಷೆ ಮಂಜುಳಾ ಪ್ರಭುರಾಜ, ಕ್ಷೇತ್ರ ಸಮನ್ವಯಾಧಿಕಾರಿ ಬಸವಲಿಂಗಪ್ಪ ಹುಡೇದ್ ಇದ್ದರು. 
ಜಿಲ್ಲೆ

ಮಕ್ಕಳ ಕಲಿಕಾಮಟ್ಟ ಸುಧಾರಣೆಗೆ ಮುಂದಾಗಿ

Kopala - Desk - Eraveni

ಸಿಂಧನೂರು: ಮಕ್ಕಳಲ್ಲಿ ಕಲಿಕಾ ಆಸಕ್ತಿ ಮೂಡಿಸುವ ಚಟುವಟಿಕೆಗಳನ್ನು ಶಿಕ್ಷಕರು ಸದಾ ಆಯೋಜಿಸುತ್ತಿರಬೇಕು. ಅಂದಾಗ ಮಕ್ಕಳು ಹೊಸತನ ಕಲಿಕೆಯತ್ತ ಗಮನಹರಿಸುತ್ತಾರೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ಇಲ್ಲಿನ ಖಸಬವಾಡಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಉರ್ದು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಶಾಲೆಗಳಿಗೆ ಸೌಲಭ್ಯ ಜತೆಗೆ ಹೊಸ ತಂತ್ರಜ್ಞಾನದ ಪಿಠೋಪಕರಣಗಳನ್ನು ಒದಗಿಸುತ್ತಿದೆ. ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಶಿಕ್ಷಕರು ಮುಂದಾಗಬೇಕೆಂದರು.

ಎಸ್ಡಿಎಂಸಿ ಅಧ್ಯಕ್ಷ ಅಕ್ತರ್‌ಪಾಷಾ, ನಗರಸಭೆ ಅಧ್ಯಕ್ಷೆ ಪ್ರಿಯಾಂಕಾ ರೋಹಿತ್‌ಕುಮಾರ, ಉಪಾಧ್ಯಕ್ಷೆ ಮಂಜುಳಾ ಪ್ರಭುರಾಜ, ಕ್ಷೇತ್ರ ಸಮನ್ವಯಾಧಿಕಾರಿ ಬಸವಲಿಂಗಪ್ಪ ಹುಡೇದ್, ಬಿಸಿಯೂಟ ಅಧಿಕಾರಿ ಸಾಬಣ್ಣ ವಗ್ಗರ್, ನಗರಸಭೆ ಸದಸ್ಯ ಕರೀಂಸಾಬ್, ಪ್ರಮುಖರಾದ ಮಾನವ್ವ ಆರ್.ನಾಯಕ, ಅಲಿಮುದ್ದೀನ್, ನಯೀಮ್‌ಪಾಷಾ, ರೇಷ್ಮಾ ಸುಲ್ತಾನ್, ರವಿ ಪವಾರ್, ಹನುಮಂತಪ್ಪ, ಚನ್ನವೀರನಗೌಡ ಇದ್ದರು.