ಜಿಲ್ಲೆ

ಶಿಕ್ಷಕರ ವರ್ಗಾವಣೆಗೆ ಕಣ್ಣೀರು ಹಾಕಿದ ಮಕ್ಕಳು...

ಗುತ್ತಲ: ಕಳೆದ 16 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಿಕ್ಷಕರೊಬ್ಬರು ವರ್ಗಾವಣೆಗೊಂಡಿದ್ದಕ್ಕೆ ನೂರಾರು ವಿದ್ಯಾರ್ಥಿಗಳು ಕಣ್ಣೀರಿಟ್ಟು ಬೀಳ್ಕೊಟ್ಟ ಘಟನೆ ಶುಕ್ರವಾರ ಸಮೀಪದ ನೆಗಳೂರ ಗ್ರಾಮದ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಜರುಗಿದೆ.

ಕಳೆದ ಬುಧವಾರ ವರ್ಗಾವಣೆಗೊಂಡ ದೈಹಿಕ ಶಿಕ್ಷಕ ಸಿದ್ದರಾಮಯ್ಯ ವಿ. ಹಿರೇಮಠ ಅವರು ನೆಗಳೂರ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯಿಂದ ಕೋಣನತಂಬಿಗಿ ಗ್ರಾಮದ ಶಾಲೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಹಿರೇಮಠ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಗ್ರಾ.ಪಂ, ಎಸ್​ಡಿಎಂಸಿ ಸದಸ್ಯರು ಹಮ್ಮಿಕೊಂಡಿದ್ದರು.

ಕಾರ್ಯಕ್ರಮದ ಮುಕ್ತಾದ ನಂತರ ಶಿಕ್ಷಕ ಹಿರೇಮಠರಿಗೆ ಶಾಲೆಯ ಗೇಟ್ ವರೆಗೆ ಮಕ್ಕಳು ಹಾಗೂ ಎಸ್​ಡಿಎಂಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಪಾಲಕರು ಬೀಳ್ಕೊಡುತ್ತಿದ್ದ ವೇಳೆ ಮಕ್ಕಳು ಭಾವುಕರಾಗಿ ಕಣ್ಣೀರಿಟ್ಟರು. ಸುದೀರ್ಘವಾಗಿ ಸೇವೆ ಸಲ್ಲಿಸಿ, ಅಲ್ಲಿಂದ ವರ್ಗಾವಣೆಗೊಂಡ ಶಿಕ್ಷಕ ಹಿರೇಮಠ ಅವರು, ಮಕ್ಕಳ, ಪಾಲಕರ ಪ್ರೀತಿಯ ಕಣ್ಣೀರಿಗೆ ಕೆಲ ಕಾಲ ತಾವೂ ಭಾವುಕರಾಗಿ ಮಕ್ಕಳನ್ನು ತಬ್ಬಿಕೊಂಡು ಸಮಾಧಾನ ಹೇಳಿದರು.