ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವ ವಿನೂತನ ಕಾರ್ಯಕ್ರಮಕ್ಕೆ ಬಿಇಒ ಸೋಮಶೇಖರಗೌಡ ಪಾಟೀಲ ಚಾಲನೆ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಮುಳುಗುಂದ, ಶಿಕ್ಷಕರ ಸಂಘದ ಉಪಾಧ್ಯಕ್ಷ ಸುಮಂಗಲಾ ತೊಂಡಿಹಾಳ, ಪ್ರಾಚಾರ್ಯ ಶರಣಯ್ಯ ಹಾಳಕೇರಿ, ಉಪ ಪ್ರಾಚಾರ್ಯ ಸಂಗನಗೌಡ ಮಾಲಿಪಾಟೀಲ್, ಮುಖ್ಯಶಿಕ್ಷಕ ಶರಣಬಸಪ್ಪ ಬಿಲ್ಲಾರ, ಪ್ರಮುಖರಾದ ಬಸನಗೌಡ ರಾಯನಗೌಡ್ರ, ಶರಣಗೌಡ ಪಾಟೀಲ ಬಂಡಿ ಇತರರಿದ್ದರು. 
ಜಿಲ್ಲೆ

ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ

Kopala - Desk - Eraveni

ಯಲಬುರ್ಗಾ: ಶಿಕ್ಷಣದಿಂದ ಮಾತ್ರ ನಮ್ಮ ಹಾಗೂ ವ್ಯವಸ್ಥೆ ಬದಲಾವಣೆ ಸಾಧ್ಯ ಎಂದು ಬಿಇಒ ಸೋಮಶೇಖರಗೌಡ ಪಾಟೀಲ ಹೇಳಿದರು.

ತಾಲೂಕಿನ ಬಂಡಿ ಕ್ಲಸ್ಟರ್‌ನ ಕೆಪಿಎಸ್ ಶಾಲೆಗಳ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ದಾಖಲಾತಿ ಆಂದೋಲನ ಹಾಗೂ ಹಾಜರಾತಿ ಹೆಚ್ಚಿಸುವ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರ ಮತ್ತು ಶಿಕ್ಷಣ ಇಲಾಖೆ ಮಕ್ಕಳ ಸರ್ವತೋಮುಖ ಬೆಳವಣಿಗಾಗಿ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಆ ಎಲ್ಲ ಮಾಹಿತಿ ಗ್ರಾಮಸ್ಥರಿಗೆ ತಲುಪಿಸಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಮತ್ತು ಹಾಜರಾತಿ ಹೆಚ್ಚಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಮುಳುಗುಂದ ಮಾತನಾಡಿ, ರಾಜ್ಯದಲ್ಲಿಯೇ ಪ್ರತಿ ಕ್ಲಸ್ಟರ್‌ಗೆ ಒಂದು ಶಾಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮ ರೂಪಿಸಿದ ಕೀರ್ತಿ ಬಿಇಒಗೆ ಸಲ್ಲುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಭಿನ್ನವಾದ ಶಕ್ತಿ, ಸಾಮರ್ಥ್ಯ ಮತ್ತು ಪ್ರತಿಭೆ ಇರುತ್ತದೆ. ನಾವೆಲ್ಲರೂ ಪೋಷಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿಸಲು ಪ್ರಯತ್ನಿಸೋಣ ಎಂದರು.

ಶಿಕ್ಷಕರ ಸಂಘದ ಉಪಾಧ್ಯಕ್ಷ ಸುಮಂಗಲಾ ತೊಂಡಿಹಾಳ, ಪ್ರಾಚಾರ್ಯ ಶರಣಯ್ಯ ಹಾಳಕೇರಿ, ಉಪ ಪ್ರಾಚಾರ್ಯ ಸಂಗನಗೌಡ ಮಾಲಿಪಾಟೀಲ್, ಮುಖ್ಯಶಿಕ್ಷಕ ಶರಣಬಸಪ್ಪ ಬಿಲ್ಲಾರ, ಪ್ರಮುಖರಾದ ಬಸನಗೌಡ ರಾಯನಗೌಡ್ರ, ಶರಣಗೌಡ ಪಾಟೀಲ ಬಂಡಿ ಇತರರಿದ್ದರು.