ಮಾಂಜರಿ: ಮಕ್ಕಳು ದೇಶದ ಸಂಪತ್ತು. ಮಕ್ಕಳ ಭವಿಷ್ಯ ಭದ್ರಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಕನಸು ನನಸಾಗಿಸಲು ಪಾಲಕರು ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕು ಎಂದು ಸದಲಗಾ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ವೀರೇಶ ಪಾಟೀಲ ಹೇಳಿದರು.
ಗ್ರಾಮದ ಶಾಂತಿ ಸಾಗರ ಶಿಕ್ಷಣ ಪ್ರಸಾರಕ ಮಂಡಳದ ಕನ್ನಡ ಮಾಧ್ಯಮ ಪೂರ್ವಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿ ಶಿಕ್ಷಕರ ಸುಮನ ಸಂಗಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆನ್ನವರ ಮಾತನಾಡಿ, ಪ್ರಾಥಮಿಕ ಶಿಕ್ಷಣ ಮಕ್ಕಳಿಗೆ ಭದ್ರ ಬುನಾದಿಯಾಗಿದೆ. ಮಕ್ಕಳಲ್ಲಿ ಕ್ರಿಯಾಶೀಲತೆ, ಆತ್ಮವಿಶ್ವಾಸ ವೃದ್ಧಿಸುವ ಕೆಲಸವಾಗಬೇಕು ಎಂದು ಹೇಳಿದರು.
ಸುರೇಂದ್ರ ಪಿಂಪಳೆ ಅನಿಸಿಕೆ ವ್ಯಕ್ತಪಡಿಸಿದರು. ಶಾಲೆಯ ಹಳೆ ವಿದ್ಯಾರ್ಥಿ ಮತ್ತು ಶಿಕ್ಷಕರನ್ನು ಸತ್ಕರಿಸಲಾಯಿತು.
ಶಿಕ್ಷಣ ಪ್ರಸಾರಕ ಮಂಡಳದ ಅಧ್ಯಕ್ಷ ಸನತಕುಮಾರ ಪಾಟೀಲ, ಕಾರ್ಯದರ್ಶಿ ದಾದಾಸಾಹೇಬ ಬೋಜಕರ, ದುರ್ಯೋಧನ ವಸವಾಡೆ, ಶ್ರೀಧರ ಭೋಜಕರ, ಅಶೋಕ ಕೋಥಳಿ, ಶ್ರೀಕಾಂತ ಕಟಕೋಳೆ, ಸಾಗರ ಮಂಗಸುಳೆ, ದತ್ತ ಶೇತಕರಿ, ಅಮರ ಯಾದವ, ಆದಪ್ಪ ಚೌಗುಲೆ, ವಿದ್ಯಾಧರ ವಸವಾಡೆ, ಮನೋಹರ ಭೋಜಕರ, ನೇಮಿನಾಥ ವಸವಾಡೆ, ಪಾಂಡುರಂಗ ಕುಲಕರ್ಣಿ, ಸುನೀಲ ಒಡಗೋಲೆ ಸ್ವಾಗತಿಸಿದರು. ಶಿಕ್ಷಕಿ ಶೆಟ್ಟಿ ನಿರೂಪಿಸಿದರು.