ಮಮದಾಪುರ: ಸಮಾಜದಲ್ಲಿ ಗುರುವಿಗೆ ಮಹತ್ವದ ಸ್ಥಾನವಿದ್ದು, ಮಕ್ಕಳ ಬಾಳು ಬೆಳಗುವ ಶ್ರೇಷ್ಠ ಕೆಲಸ ಮಾಡುತ್ತಾರೆ ಎಂದು ಜಿಪಂ ಮಾಜಿ ಸದಸ್ಯ ಟಿ.ಆರ್. ಕಾಗಲ್ ಹೇಳಿದರು.
ಸಮೀಪದ ಕೊಳವಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಿವತ್ತ ಶಿಕ್ಷಕ ಬಿ.ಎಂ. ಶಿವಾಪುರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಬಿ.ಎಂ. ಶಿವಾಪುರ ಅವರು ವಿದ್ಯೆ ಕಲಿತ ಶಾಲೆಯಲ್ಲಿ ಶಿಕ್ಷಕರಾಗಿ 30 ವರ್ಷ ಸೇವೆ ಸಲ್ಲಿಸುವ ಜತೆಗೆ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಸಹಶಿಕ್ಷಕರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಶಾಲೆಯ ಏಳಿಗೆಗಾಗಿ ಶ್ರಮವಹಿಸಿದ್ದಾರೆ. 2024ರಲ್ಲಿ ಸುವರ್ಣ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
2013-14ನೇ ಸಾಲಿನ ವಿದ್ಯಾರ್ಥಿಗಳು ಗುರುಕಾಣಿಕೆಯಾಗಿ ಚಿನ್ನದುಂಗುರ ನೀಡಿ ಪಾದಪೂಜೆ ನೆರವೇರಿಸಿ ಬಳಿಕ ಬೆಳ್ಳಿರಥದಲ್ಲಿ ಶಿವಾಪುರ ದಂಪತಿಯ ಮೆರವಣಿಗೆ ಮಾಡಿದರು. ಗ್ರಾಪಂ ಅಧ್ಯಕ್ಷ ಕರೆಪ್ಪ ಬಡಿಗವಾಡ, ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಮಮದಾಪುರ, ಮುಖ್ಯಶಿಕ್ಷಕ ಬಿ.ಎಸ್.ನಂದೆಪ್ಪನವರ, ಪ್ರೌಢಶಾಲೆ ಮುಖ್ಯಶಿಕ್ಷಕ ಎಂ.ಬಿ.ಮುತ್ನಾಳ, ಕೆ.ಕೆ.ಹೊಳಕರ, ಎಲ್.ಎಸ್. ಸಿಂಗಾಡಿ, ನಿವತ್ತ ಶಿಕ್ಷಕರಾದ ಕೆ.ವೈ. ತಳವಾರ, ಕೆ.ಬಿ.ಮಾದರ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಶಂಕರ ವನಕಿ, ಮುಖಂಡರಾದ ರಾಮಣ್ಣ ಖಾನಾಪುರ, ಮಾರುತಿ ಹಂಜಿ, ಸಂಜು ಹಿರಟ್ಟಿ, ಪ್ರಕಾಶ ಭುಜನ್ನವರ, ಮಾರುತಿ ಹೊಸಮನಿ, ನಿಜಲಿಂಗಪ್ಪ ಅಂಗಡಿ, ಭೀಮಶಿ ಕೊತ್ತಲ, ಆನಂದ ಹಟ್ಟಿಗೌಡರ, ಶಿವಪುತ್ರ ಕಿಚಡಿ, ಅಜ್ಜಪ್ಪ ಕರಿಗಾರ, ಹಾಗೂ ಶಾಲಾ ಸಹ ಶಿಕ್ಷಕರು ಹಾಗೂ ಇತರರಿದ್ದರು. ಬಾಳಯ್ಯ ಪೂಜೇರಿ ನಿರೂಪಿಸಿದರು.