ಜಿಲ್ಲೆ

ಮಕ್ಕಳ ಶ್ರೇಯೋಭಿವೃದ್ಧಿಗೆ ವಿದ್ಯಾರ್ಥಿ ಮಿತ್ರ ಸಹಕಾರಿ

ಮಮದಾಪುರ: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಪ್ರಕಟಿಸುತ್ತಿರುವ "ವಿದ್ಯಾರ್ಥಿ ಉದ್ಯೋಗ ಮಿತ್ರ' ನುರಿತ ಪ್ರಾಧ್ಯಾಪಕರಿಂದ ಸಿದ್ಧಗೊಂಡಿದ್ದು, ಮಕ್ಕಳ ಪಠ್ಯ ಚಟುವಟಿಕೆ ಹಾಗೂ ಸಾಮಾನ್ಯ ಜ್ಞಾನ ವೃದ್ಧಿಗೆ ಬಹಳಷ್ಟು ಉಪಯುಕ್ತವಾಗಿದೆ ಎಂದು ಬಿಇಒ ಜಿ.ಬಿ.ಬಳಗಾರ ಹೇಳಿದರು.

ಸಮೀಪದ ಹಿರೇನಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ವಿಜಯವಾಣಿ "ವಿದ್ಯಾರ್ಥಿ ಉದ್ಯೋಗ ಮಿತ್ರ' ಪತ್ರಿಕೆ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳೂ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಉತ್ತಮ ಅಂಕ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ ಎಂಬ ಸದುದ್ದೇಶದಿಂದ ಸ್ಥಳಿಯ ಗ್ರಾಮ ಪಂಚಾಯಿತಿ ಆಡಳಿತ ವರ್ಗ 8 ತಿಂಗಳ ಅವಧಿಗೆ ಉಚಿತವಾಗಿ "ವಿದ್ಯಾರ್ಥಿ ಉದ್ಯೋಗ ಮಿತ್ರ' ಪತ್ರಿಕೆ ವಿತರಿಸಲು ಮುಂದಾಗಿದ್ದು, ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಶಿಕ ಎಸ್​.ಎ.ಕೇರಿ ಮಾತನಾಡಿ, ಮಕ್ಕಳ ಶ್ರೇಯೋಭಿವೃದ್ಧಿ ದೃಷ್ಟಿಯಿಂದ ಗ್ರಾಮ ಪಂಚಾಯಿತಿ ಪಿಡಿಒ ಎಂ.ಕೆ.ಪಾಟೀಲ, ಗ್ರಾಪಂ ಅಧ್ಯರು ಹಾಗೂ ಸರ್ವ ಸದಸ್ಯರು ಒಗ್ಗೂಡಿ ವಿದ್ಯಾರ್ಥಿ ಮಿತ್ರ ವಿತರಿಸುತ್ತಿರುವ ಕಾರ್ಯ ಸಂಸತವಾಗಿದೆ. ಮಕ್ಕಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ಬಿಆರ್​ಸಿ ಎಸ್​.ವಿ.ಕುಲಕರ್ಣಿ, ಎಸ್ಡಿಎಂಸಿ ಅಧ್ಯ ಮಹಾದೇವ ಜಟ್ಟೆಪ್ಪನವರ, ಗ್ರಾಪಂ ಅಧ್ಯ ಸಿದ್ದಪ್ಪ ಕೌಜಲಗಿ, ಅರಬಣ್ಣ ಯರಗಟ್ಟಿ, ವರದಿಗಾರ ಸಂಗಮೇಶ ಅಂಗಡಿ, ಶಿಕರಾದ ಎಂ.ಐ.ಗಾಣಿಗೇರ, ಎಚ್​.ಎಸ್​.ಇಜಾಮದಾರ್​, ಆರ್​.ಬಿ.ಹುಣೂರ, ಎಂ.ಎಸ್​.ಜೋಗದಂಡೆ ಇತರರಿದ್ದರು.