ಹುಬ್ಬಳ್ಳಿ: ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಇಲ್ಲಿಯ ಉಣಕಲ್ ಸಿದ್ದಕಲ್ಯಾಣನಗರದ ಜ್ಞಾನದಾ ಎಜುಕೇಷನ್ ಸೊಸೈಟಿಯ ತಕ್ಷ ಪ್ರಿ-ಸ್ಕೂಲ್‌ನಲ್ಲಿ ಶನಿವಾರ ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯ ಧಿರಿಸು ಧರಿಸಿ ವಿಜೃಂಭಿಸಿದರು.
ನರ್ಸರಿ, ಎಲ್‌ಕೆಜಿ, ಯುಕೆಜಿ ಮಕ್ಕಳು ವಿವಿಧ ರೀತಿಯ ಉಡುಪು ತೊಟ್ಟು ಶ್ರೀಕೃಷ್ಣ-ರಾಧೆಯಂತೆ ಕಂಗೊಳಿಸಿದರು. ಶಿಕ್ಷಕರು ಹಾಕಿದ ಹೆಜ್ಜೆಯಂತೆ ಕುಣಿದು ಕುಪ್ಪಳಿಸಿರು.
ಮುಖ್ಯೋಪಾಧ್ಯಾಯಿನಿ ಅಪರ್ಣಾ ಕೊಹ್ಲಿ, ಸಂಸ್ಥೆ ಕಾರ್ಯದರ್ಶಿ ಸಾವಿತ್ರಿ ಕೋರಿಕೊಪ್ಪ, ಸಂಯೋಜಕಿ ಶ್ರೀದೇವಿ ಸುಗಂಧಿ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.