ಜಿಲ್ಲೆ

ಮಕ್ಕಳಾಗಲಿಲ್ಲವೆಂದು ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

Haveri - Kariyappa Aralikatti

ಹಾವೇರಿ: ಮದುವೆಯಾಗಿ 10 ವರ್ಷವಾದರೂ ಮಕ್ಕಳಾಗಲಿಲ್ಲವೆಂದು ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದೇವಿಹೊಸೂರ ಗ್ರಾಮದಲ್ಲಿ ನಡೆದಿದೆ.

ರೋಶನಿಬೇಗಮ್​ ಅಲ್ತಾಪಸಾಹೇಬ ಯರೇಶೀಮಿ (38) ಮೃತ ಮಹಿಳೆ.

ಇವರು ಮದುವೆಯಾಗಿ 10 ವರ್ಷ ಕಳೆದರೂ ಮಕ್ಕಳಾಗಲಿಲ್ಲವೆಂದು ಬೇಸರ ಮಾಡಿಕೊಂಡು ಮನೆಯಲ್ಲಿಯೆ ನೇಣು ಬಿಗಿದುಕೊಂಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.