ನೇರಲಕೆರೆಯ ಶ್ರೀಅಮೃತೇಶ್ವರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದಾನಿ ಶಿವರಾಜ್ ವಿದ್ಯಾರ್ಥಿಗಳಿಗೆ ವಿವಿಧ ಕಲಿಕಾ ಪರಿಕರ ವಿತರಿಸಿದರು. ಮಲ್ಲೇಶಪ್ಪ, ಷಡಾಕ್ಷರಪ್ಪ, ಎನ್.ಎಂ.ಬಸವರಾಜ, ಕೆ.ಟಿ.ಹಾಲೇಶ್ ಇತರರಿದ್ದರು. 
ಜಿಲ್ಲೆ

ಮಕ್ಕಳೇ ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಿ

ಜಿ.ಹೆಚ್. ಧನ್ಯಕುಮಾರ್

ತರೀಕೆರೆ: ಪಾಲಕರ ಆರ್ಥಿಕ ಸಂಕಷ್ಟದ ಕಾರಣಕ್ಕೆ ಮಕ್ಕಳು ಓದಿನಿಂದ ವಿಮುಖರಾಗಬಾರದು. ಬದಲಾಗಿ ಸರ್ಕಾರ ಮತ್ತು ದಾನಿಗಳು ನೀಡುವ ಸೌಲಭ್ಯ ಪಡೆದು ಜೀವನ ಉಜ್ವಲಗೊಳಿಸಿಕೊಳ್ಳಬೇಕು ಎಂದು ಬೆಟ್ಟತಾವರಕೆರೆ ಗ್ರಾಮದ ದಾನಿ ಶಿವರಾಜ್ ಹೇಳಿದರು.
ಶುಕ್ರವಾರ ನೇರಲಕೆರೆ ಗ್ರಾಮದ ಶ್ರೀಅಮೃತೇಶ್ವರ ಪ್ರೌಢಶಾಲೆಯಲ್ಲಿ ಕೆಕೆಜಿಬಿ ವಿದ್ಯಾರ್ಥಿ ನಿಲಯ ಹಾಗೂ ಶಾಲೆ ಮಕ್ಕಳಿಗೆ ಉಚಿತ ನೋಟ್‌ಬುಕ್, ಸ್ಕೂಲ್‌ಬ್ಯಾಗ್, ಟ್ರಾೃಕ್‌ಸೂಟ್ ಸೇರಿ ವಿವಿಧ ಕಲಿಕಾ ಪರಿಕರ ವಿತರಿಸಿ ಮಾತನಾಡಿ, ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಸೌಜನ್ಯ, ಸಂಸ್ಕಾರ ರೂಢಿಸಿಕೊಂಡು ಸಮಾಜದ ಆಸ್ತಿಗಳಾಗಿ ಪರಿವರ್ತನೆಯಾಗಬೇಕು ಎಂದರು.
ಸಮತಳ ಗ್ರಾಮದ ದಾನಿ ಮಲ್ಲೇಶಪ್ಪ, ಶಾಲಾ ಸಮಿತಿ ಉಪಾಧ್ಯಕ್ಷ ಷಡಾಕ್ಷರಪ್ಪ, ಸದಸ್ಯ ಎನ್.ಎಂ.ಬಸವರಾಜ, ಮುಖ್ಯ ಶಿಕ್ಷಕ ಕೆ.ಟಿ.ಹಾಲೇಶ್ ಮತ್ತಿತರರಿದ್ದರು.