ಔರಾದ್ ತಾಲೂಕಿನ ಕೌಡಗಾಂವ ಸರ್ಕಾರಿ ಪ್ರೌಢ ಶಾಲೆಯಿಂದ ಬಗದಲ್ ಶಾಲೆಗೆ ವರ್ಗಾವಣೆಯಾದ ದೈಹಿಕ ಶಿಕ್ಷಕ ಗೋಪಾಲರೆಡ್ಡಿ ಅವರನ್ನು ಸೋಮವಾರ ಮಕ್ಕಳು ಬಿಕ್ಕಿ ಬಿಕ್ಕಿ ಅಳುತ್ತಲೇ ಬೀಳ್ಕೊಟ್ಟರು. ಮುಖ್ಯಗುರು ಬಾಲಿಕಾ ಮೆಕರೆ, ಕೃತಿಕಾ, ಶ್ರೀದೇವಿ ಇತರರಿದ್ದರು.  
ಜಿಲ್ಲೆ

ಅಳುತ್ತಲೇ ನೆಚ್ಚಿನ ಶಿಕ್ಷಕನ ಬೀಳ್ಕೊಟ್ಟ ಮಕ್ಕಳು

ಔರಾದ್: ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸಂಬAಧ ತುಂಬ ಗಟ್ಟಿಯಾದದ್ದು. ನೆಚ್ಚಿನ ಶಿಕ್ಷಕನ ವರ್ಗಾವಣೆಗೆ ವಿದ್ಯಾರ್ಥಿಗಳು ನಮ್ಮನ್ನು ಬಿಟ್ಟು ಹೋಗಬೇಡಿ ಸರ್ ಎಂದು ಬಿಕ್ಕಿ ಬಿಕ್ಕಿ ಅಳುತ್ತಲೇ ನಮಸ್ಕರಿಸಿ ಬೀಳ್ಕೊಟ್ಟ ಪ್ರಸಂಗ ಕೌಡಗಾಂವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ನಡೆದಿದೆ.

ಕೌಡಗಾಂವ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ೧೧ ವರ್ಷ ಸೇವೆ ಸಲ್ಲಿಸಿ ಬೀದರ್ ತಾಲೂಕಿನ ಬಗದಲ್ ಶಾಲೆಗೆ ವರ್ಗಾವಣೆಯಾದ ದೈಹಿಕ ಶಿಕ್ಷಕ ಗೋಪಾಲರೆಡ್ಡಿ ಅವರನ್ನು ಮಕ್ಕಳು ಒಲ್ಲದ ಮನಸ್ಸಿನಿಂದಲೇ ಕಳಿಸಿಕೊಟ್ಟರು.

ಶಿಕ್ಷಕ ಗೋಪಾಲರೆಡ್ಡಿ ಸಹ ಶಾಲೆಯ ಸಹೋದರ, ಸಹೋದರಿಯರು, ಸಿಬ್ಬಂದಿಗೆ ಸೆಲ್ಯೂಟ್ ಹೊಡೆದು ಅಳುತ್ತಲೇ ಮಕ್ಕಳಿಗೆ ಚೆನ್ನಾಗಿ ಓದುವಂತೆ ಹೇಳಿ ಧೈರ್ಯ ತುಂಬಿದರು.

ಸುಮಾರು ೧೧ ವರ್ಷ ಮಕ್ಕಳ ಸೇವೆ, ಅವರ ಅಭಿವೃದ್ಧಿಗೆ ಶ್ರಮಿಸಲು ಸಹಕಾರ ಮತ್ತು ಪ್ರೇರಣೆ ನೀಡಿದ ತಾಯಿ ಸಮಾನ ಮುಖ್ಯಗುರು ಬಾಲಿಕಾ ಮೆಕರೆ ಕಾಲಿಗೆ ಬಿದ್ದು, ತಬ್ಬಿಕೊಂಡು ಇಬ್ಬರು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಎಂಥವರ ಮನ ಕಲಕುವಂತ್ತಿತ್ತು.

ಶಿಸ್ತಿನ ಸಿಪಾಯಿಯಾದ ಶಿಕ್ಷಕ ರೆಡ್ಡಿ ನಿತ್ಯ ಬೀದರ್‌ನಿಂದ ಶಾಲೆಗೆ ಆಗಮಿಸಿ ಮಕ್ಕಳಿಗೆ ಯೋಗ, ವ್ಯಾಯಾಮ, ಆಟ, ಕಲೆ, ಕ್ರೀಡೆ, ಆಶುಭಾಷಣ, ಸ್ಕೌಟ್ಸ್-ಗೈಡ್ಸ್ನಂಥ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೇರಣೆ ನೀಡುತ್ತಿದ್ದರು. ಎಲ್ಲ ರಂಗದಲ್ಲೂ ಉತ್ತಮವಾಗಿ ಬೆಳೆದು ಸಾಧಕರಾಗಿ ಹೊರಹೊಮ್ಮುವಂತೆ ಹುರಿದುಂಬಿಸಿದ್ದರಿAದ ಎಲ್ಲರಿಗೂ ಅಚ್ಚುಮೆಚ್ಚಿನ ಶಿಕ್ಷಕರೆಂದೇ ಹೆಸರು ಗಳಿಸಿದ್ದಾರೆ.

ತನ್ನ ಶಾಲೆ ಮಕ್ಕಳು ರಾಜ್ಯ ಮಟ್ಟದ ಖೋಖೋದಲ್ಲಿ ಸ್ಪರ್ಧಿಸುವಂತೆ ಮತ್ತು ಶಾಲೆಯ ಸ್ಕೌಟ್ಸ್-ಗೈಡ್ಸ್ ಮಕ್ಕಳಿಗೆ ರಾಜ್ಯಪಾಲ ಥಾವರಚಂದ ಗೆಹಲೋತ್ ಅವರಿಂದ ಪ್ರಶಸ್ತಿ ಸ್ವೀಕರಿಸುವಂತೆ ಮಾಡಿದ ಕೀರ್ತಿ ಶಿಕ್ಷಕ ಗೋಪಾಲರೆಡ್ಡಿ ಅವರದು.

ಮನೆಯಲ್ಲಿ ತಂದೆಯವರ ಆರೋಗ್ಯ ನೋಡಿಕೊಳ್ಳಲು ಶಿಕ್ಷಕ ಗೋಪಾಲರೆಡ್ಡಿ ಅವರು ಬಗದಲ್ ಪ್ರೌಢ ಶಾಲೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಅವರ ಮುಂದಿನ ಜೀವನ ಸಂತಸಮಯವಾಗಲಿ.
| ಬಾಲಿಕಾ ಮೆಕರೆ ಮುಖ್ಯಗುರು, ಸರ್ಕಾರಿ ಪ್ರೌಢಶಾಲೆ ಕೌಡಗಾಂವ