ಜಿಲ್ಲೆ

ಚಿಕ್ಕಲ್ಲೂರು ಜಾತ್ರೆಯಲ್ಲಿ ಮಕ್ಕಳ ಭಿಕ್ಷಾಟನೆ

ನಾಗೇಶ ಎಸ್

ಕೊಳ್ಳೇಗಾಲ: ಪುಸ್ತಕ, ಪೆನ್ನು ಹಿಡಿದು ಶಿಕ್ಷಿತರಾಗಿ ಸುರಕ್ಷಿತ ಜೀವನ ನಡೆಸಬೇಕಾದ ಕಂದಮ್ಮಗಳು ತಟ್ಟೆ ಹಿಡಿದು, ಕೈಚಾಚಿ ಭಿಕ್ಷಾಟನೆಯಲ್ಲಿ ತೊಡಗಿದ್ದರೂ ಮಕ್ಕಳಾ ರಕ್ಷಣಾ ಸಮಿತಿ ಹಾಗೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿವೆ.
ಪ್ರವಾಸಿ ತಾಣಗಳು, ಬಸ್ ನಿಲ್ದಾಣಗಳಲ್ಲಿ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗುವುದು ಸಾಮಾನ್ಯವಾಗಿತ್ತು. ಆದರೀಗ ಜಾತ್ರೆಗಳು ಭಿಕ್ಷಾಟನೆಯ ಹಾಟ್‌ಸ್ಪಾಟ್‌ಗಳಾಗಿವೆ. ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆಯಲ್ಲಿ ಹಲವು ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಕನಿಕರ ಬರುವಂತೆ ಭಿಕ್ಷೆ ಬೇಡುವುದು, ಕಾಸು ಕೊಡುವವರೆಗೂ ಹಿಂದೆ ಓಡುವುದು. ಕಾಲು, ಕೈ ಮುಟ್ಟಿ ಹಣ ಕೊಡುವಂತೆ ಪೀಡಿಸುತ್ತಿದ್ದಾರೆ. ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲ ಕ್ಷ್ಯ ವಹಿಸಿದ್ದಾರೆ. ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ ಕಾಯ್ದೆ ಜಾರಿ ಕಾರ್ಯಾಚರಣೆಯಲ್ಲಿ ನಿಗಾ ವಹಿಸಿದ್ದಾರೆ. ಆದರೆ ಅವರಿಗೆ ಈ ಭಿಕ್ಷಾಟನೆಗೆ ತೊಡಗಿರುವ ಮಕ್ಕಳು ಕಾಣಿಸುತ್ತಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.