ಜಿಲ್ಲೆ

ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಆರತಿ ಬೆಳಗಿ ಮಕ್ಕಳಿಗೆ ಸ್ವಾಗತ

ಕುಂದಾಪುರ: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳನ್ನು ಶಿಕ್ಷಕರು ಹೂವು ನೀಡಿ ಆರತಿ ಬೆಳಗಿ ಸಂಭ್ರಮದಿಂದ ಬರವಾಡಿಕೊಂಡು, ಸ್ವಾಗತ ಕೋರಿದರು. ಮಕ್ಕಳು ಖುಷಿ ಖುಷಿಯಿಂದ ಹೆಜ್ಜೆ ಹಾಕುತ್ತಾ ಶಾಲೆಯತ್ತ ಬಂದರು.

ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ.ಪೈ ಉದ್ಘಾಟಿಸಿದರು. ಅಸೋಸಿಯೇಶನ್ ಕಾರ್ಯದರ್ಶಿ ಎಚ್.ಗಣೇಶ ಕಾಮತ್, ಎಸ್.ವಿ. ವಿದ್ಯಾಸಂಸ್ಥೆಗಳ ಸಂಚಾಲಕ ಎನ್.ಸದಾಶಿವ ನಾಯಕ್, ಆಡಳಿತ ಮಂಡಳಿ ಸದಸ್ಯರಾದ ಎಂ.ವಿನೋದ ಪೈ, ಜಿ.ವೆಂಕಟೇಶ ನಾಯಕ್, ಎನ್.ಅಶ್ವಿನ್ ನಾಯಕ್, ಎಂ.ನಾಗೇಂದ್ರ ಪೈ, ಮುಖ್ಯಶಿಕ್ಷಕ ಜಿ.ವಿಶ್ವನಾಥ ಭಟ್, ಶಿಕ್ಷಕರಕ್ಷಕ ಸಮಿತಿ ಕಾರ್ಯದರ್ಶಿ ಅಜಿತ್ ಭಟ್, ನಿಯೋಜಿತ ಶಿಕ್ಷಕಿ ಫಾತಿವಾ ಮರಿಯಾ ಬೆರೆಟ್ಟೊ, ಪ್ರಭಾರ ಮುಖ್ಯಶಿಕ್ಷಕ ದೀಕ್ಷಿತ್ ಮೇಸ್ತ, ಶಾಲೆ ಶಿಕ್ಷಕರು, ಶಿಕ್ಷಕರಕ್ಷಕ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.