ಇಳಕಲ್ಲ ತಾಲೂಕಿನ ಬಲಕುಂದಿ ತಾಂಡಾ ಶಾಲೆ ಮಕ್ಕಳು ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ಅಕ್ಷರದ ಆಕಾರದ ಮಾದರಿಯಲ್ಲಿ ನಿಲ್ಲುವ ಮೂಲಕ ಹರ್ಷ ವ್ಯಕ್ತಪಡಿಸಿದರು. 
ಜಿಲ್ಲೆ

ಇಸ್ರೋ ಸಾಧನೆಗೆ ಮಕ್ಕಳ ಹರ್ಷ

ಇಳಕಲ್ಲ(ಗ್ರಾ): ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಅತ್ಯಂತ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದ ಹಿನ್ನೆಲೆಯಲ್ಲಿ ಬಲಕುಂದಿ ತಾಂಡಾದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇಸ್ರೋ ಅಕ್ಷರದ ಆಕಾರದ ಮಾದರಿಯಲ್ಲಿ ನಿಲ್ಲುವ ಮೂಲಕ ಇಸ್ರೋ ವಿಜ್ಞಾನಿಗಳ ಸರ್ವ ತಂಡದ ಕಾರ್ಯಕ್ಕೆ ಗುರುವಾರ ಹರ್ಷ ವ್ಯಕ್ತಪಡಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಡಿ.ಎಂ.ಚವಾಣ, ಉಪಾಧ್ಯಕ್ಷ ವಿಠಲ ಚವ್ಹಾಣ, ಮುಖ್ಯಶಿಕ್ಷಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪರಶುರಾಮ ಪಮ್ಮಾರ, ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಮುತ್ತಣ್ಣ ಬೀಳಗಿ, ಹಿರಿಯ ಶಿಕ್ಷಕರಾದ ಎ.ಡಿ.ಬಾಗವಾನ, ಜಿ.ಕೆ.ಮಠ, ಆರ್.ಎಸ್. ಕೊಡಗಲಿ, ಎಂ.ಎನ್.ಅರಳಿಕಟ್ಟಿ, ಎಸ್.ಎಲ್.ಜೋಗಿನ, ಎಂ.ಪಿ.ಚೇಗೂರ, ಪಿ.ಎಸ್.ಹೊಸೂರ, ಎಸ್.ಎಂ.ಮಲಗಿಹಾಳ, ಸಾಯಿರಾ ಹೆರಕಲ್, ನಿರ್ಮಲಾ ಜಾಧವ ಉಪಸ್ಥಿತರಿದ್ದರು.