ಅಳವಂಡಿ ಗ್ರಾಪಂನಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿಯ ಸಭೆ ನಡೆಯಿತು. ಪಿಡಿಒ ಕೊಟ್ರಪ್ಪ, ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ, ಪ್ರಮುಖರಾದ ಸೌಜನ್ಯ, ಸುಷ್ಮಾ, ಅನ್ನಪೂರ್ಣ, ಕಲ್ಪನಾ, ಮಾರುತಿ, ನಾರಾಯಣ, ರೆಹಮತ್‌ಬೀ ಇತರರು ಇದ್ದರು.  
ಜಿಲ್ಲೆ

ಬಾಲ್ಯ ವಿವಾಹ ತಡೆಗೆ ಎಲ್ಲರೂ ಕೈಜೋಡಿಸಿ

ಅಳವಂಡಿ: ಬಾಲ್ಯ ವಿವಾಹದಿಂದ ಮಹಿಳೆಯರ ಜೀವನ ಹಾಳಗಲಿದ್ದು, ಇದನ್ನು ತಡೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪಿಡಿಒ ಕೊಟ್ರಪ್ಪ ಅಂಗಡಿ ತಿಳಿಸಿದರು.

ಗ್ರಾಮದ ಗ್ರಾಪಂ ಸಭಾಭವನದಲ್ಲಿ ಆಯೋಜಿಸಿದ್ದ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ ಸಭೆಯನ್ನು ಉದ್ದೇಶಿಸಿ ಬುಧವಾರ ಮಾತನಾಡಿದರು.

ಮಹಿಳೆ ಮತ್ತು ಮಕ್ಕಳ ಸಾಗಣೆ ತಡೆಗಟ್ಟುವುದು ಮತ್ತು ಮಕ್ಕಳ ಸಮಗ್ರ ರಕ್ಷಣೆಗಾಗಿ ಗ್ರಾಪಂ ಮಟ್ಟದ ಸಮಿತಿ ಸತತ ಕಾರ್ಯನಿರ್ವಹಿಸಬೇಕು. ವಿವಿಧ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸತತ ನಿಗಾ ಇಡಬೇಕು ಎಂದರು.

ರಾಜೀವಗಾಂಧಿ ಪಂಚಾಯಿತಿರಾಜ್ ಯೋಜನೆಯ ೆಲೋ ಸೌಜನ್ಯ ಮಾತನಾಡಿ, 18 ವರ್ಷದೊಳಗಿನ ಮಕ್ಕಳ ಪಟ್ಟಿಯನ್ನು ಗ್ರಾಪಂಗೆ ಸಲ್ಲಿಸಬೇಕು. ಗ್ರಾಮದಲ್ಲಿ ಅನುಮನಾಸ್ಪದವಾಗಿ ಯಾರಾದರೂ ಸಂಚರಿಸಿದರೆ ಸಹಾಯವಾಣಿಗೆ ಅಥವಾ ಠಾಣೆಗೆ ಮಾಹಿತಿ ನೀಡಬೇಕು. ಬಾಲ್ಯ ವಿವಾಹ, ಮಾನವ ಕಳ್ಳಸಾಗಾಣೆ ತಡೆಗಟ್ಟುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು. ಅಂಗನವಾಡಿ ಮೇಲ್ವಿಚಾರಕಿ ರೆಹಮತ್‌ಬೀ ಮಾತನಾಡಿದರು.

ಕಾರ್ಯದರ್ಶಿ ಬಸವರಾಜ, ಪ್ರಮುಖರಾದ ಮಾರುತಿ ಕಾತರಕಿ, ನಾರಾಯಣ, ಶಂಕ್ರಪ್ಪ, ಪುಷ್ಪಾ, ಶಕುಂತಲಾ, ಮಹಾದೇವಿ, ರಾಧಾಬಾಯಿ, ಚನ್ನಮ್ಮ, ಜಾನಕಿ, ಶಿವಗ್ಯಾನಮ್ಮ ಇತರರು ಇದ್ದರು.