ಜಿಲ್ಲೆ

ಬಾಲ ಮಂದಿರದಲ್ಲಿದ್ದ ಬಾಲ ಗಭಿರ್ಣಿ ನಾಪತ್ತೆ

Haveri - Kariyappa Aralikatti

ರಾಣೆಬೆನ್ನೂರ: ಇಲ್ಲಿಯ ಸರ್ಕಾರಿ ಬಾಲ ಮಂದಿರದಲ್ಲಿ ಆಶ್ರಯ ಪಡೆದಿದ್ದ ಬಾಲ ಗಭಿರ್ಣಿಯೊಬ್ಬಳು ಶೌಚಗೃಹಕ್ಕೆ ಹೋಗುವುದಾಗಿ ಹೇಳಿ ಗೋಡೆ ಹಾರಿ ನಾಪತ್ತೆಯಾಗಿರುವ ಕುರಿತು ನಗರದ ಶಹರ ಪೊಲೀಸ್​ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

17.8 ವರ್ಷದ ಬಾಲಕಿಯು ಗಭಿರ್ಣಿಯಾಗಿದ್ದಳು.

ಈಕೆಗೆ ಹಾವೇರಿ ಸಖಿ ಒನ್​ ಸ್ಟಾಫ್​ ಸೆಂಟರ್​ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಬಾಲ ಮಂದಿರದಲ್ಲಿ ಆಶ್ರಯ ನೀಡಿದ್ದರು. ಆದರೆ, ಬಾಲಕಿಯು ಶೌಚಗೃಹಕ್ಕೆ ಹೋದಾಗ ಅಲ್ಲಿಂದ ಗೋಡೆ ಹಾರಿ ನಾಪತ್ತೆಯಾಗಿದ್ದಾಳೆ ಎಂದು ಬಾಲಮಂದಿರದ ಪರೀವಿಕ್ಷಣಾಧಿಕಾರಿ ಜ್ಯೋತಿ ಶಿಗ್ಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.