ರಾಮನಗರ: ನೀರಿನ ಬಕೆಟ್ ನಲ್ಲಿ ಮುಳುಗಿ 11 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣ ಟೌನ್ ಕಲಾನಗರದಲ್ಲಿ ಭಾನುವಾರ ಸಂಜೆ ನಡೆದಿದೆ.
ಜಿಲ್ಲೆಯ ಚನ್ನಪಟ್ಟಣ ಶಂಶಾದ್ ಪಠಾಣ್ ಮತ್ತು ಮುಷ್ಕಾನ್ ದಂಪತಿ ಮಗು ಖುಷಿ ಮೃತ ಮಗು.
ಮನೆ ಒರೆಸಲು ಬಕೆಟ್ ಗೆ ನೀರು ತುಂಬಿ ಹಾಲ್ ನಲ್ಲಿ ಇಟ್ಟಿದ್ದ ವೇಳೆ ಅವಘಡ ನಡೆದಿದೆ.
ಬಕೆಟ್ ನೀರಿನಲ್ಲಿ ಮುಳುಗಿ ಮಗು ಸಾವು ಇಡೀ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಸ್ಥಳಕ್ಕೆ ಚನ್ನಪಟ್ಟಣ ಟೌನ್ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.