ಜಿಲ್ಲೆ

ಶ್ವಾಸಕೋಶದಲ್ಲಿ ದುಂಬಿ ಸಿಲುಕಿ ಮಗು ಮೃತ್ಯು

Dakshina Kannada

ಕಾಸರಗೋಡು: ನುಳ್ಳಿಪ್ಪಾಡಿಯ ಚೆನ್ನಿಕೆರೆ ಎಂಬಲ್ಲಿ ಶ್ವಾಸಕೋಶದಲ್ಲಿ ಸಣ್ಣ ದುಂಬಿ ಸಿಲುಕಿ ಒಂದು ವರ್ಷದ ಮಗು ಸಾವನ್ನಪ್ಪಿದೆ.

ಎ.ಸತ್ಯೇಂದ್ರ-ರಂಜಿನಿ ದಂಪತಿ ಪುತ್ರ ಎಸ್.ಅನ್ವೇದ್ ಮೃತ ಬಾಲಕ. ಶನಿವಾರ ಸಂಜೆ ಮನೆಯಲ್ಲಿ ಆಡುತ್ತಿದ್ದ ಈತ ದಿಢೀರ್ ಅಸ್ವಸ್ಥನಾದ. ತಕ್ಷಣ ಪಾಲಕರು ಮಗುವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದೊಯ್ದರೂ, ಜೀವ ಉಳಿಸಲಾಗಲಿಲ್ಲ.

ಭಾನುವಾರ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಆತನ ಶ್ವಾಸಕೋಶದಲ್ಲಿ ಸಣ್ಣ ದುಂಬಿ ಕಂಡುಬಂತು. ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.