ಜಿಲ್ಲೆ

ಬೌದ್ಧಿಕ ಬೆಳವಣಿಗೆಗೆ ಕೂಸಿನ ಮನೆ ಸಹಕಾರಿ

child care center program

Kopala - Raveendra V K

ಕೊಪ್ಪಳ: ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಕೂಸಿನ ಮನೆಗಳು ಸಹಕಾರಿ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ್​ ಹೇಳಿದರು.

ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಕೂಸಿನ ಮನೆ ಕೇರ್​ ಟೇಕರ್​ಗಲಿಗೆ ಹಮ್ಮಿಕೊಂಡಿದ್ದ 7 ದಿನಗಳ ತರಬೇತಿ ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಗುರುವಾರ ಮಾತನಾಡಿದರು.

ಕೂಸಿನ ಮನೆಗಳು ಮಕ್ಕಳಿಗೆ ಬೇಕಾದ ಕಲಿಕಾ ಪೂರಕ ಚಟುವಟಿಕೆಗಳಿಂದ ಕೂಡಿರಲಿವೆ. ಗ್ರಾಪಂನಿಂದ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಆರೈಕೆದಾರರು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಿ. ನಿಮ್ಮ ಮಕ್ಕಳಂತೆ ಕಾಣಿ. ಕ್ರಮಬದ್ಧವಾಗಿ ಆಹಾರ ಪೂರೈಸಿ. ದಾಖಲಾತಿ ನಿರ್ವಹಿಸಿ. ರ್ನಿಲಕ್ಷ$್ಯವಹಿಸಬೇಡಿ. ಪ್ರತಿ ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ. ಮಕ್ಕಳ ತೂಕದ ಬಗ್ಗೆ ಪಾಲಕರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.

ಮೊಬೈಲ್​ ಕ್ರಷ್​ ಸಂಸ್ಥೆ ತರಬೇತುದಾರ ಚಿದಾನಂದಸ್ವಾಮಿ ಮಾತನಾಡಿ, ಮಕ್ಕಳ ಆರೈಕೆಗಾಗಿ 7 ದಿನಗಳ ತರಬೇತಿ ನೀಡಲಾಗಿದೆ. ಆರೈಕೆದಾರರು ಆಸಕ್ತಿವಹಿಸಿ ಕಾರ್ಯನಿರ್ವಹಿಸಿ. ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಮಾಡಿಸುವಂತೆ ತಿಳಿಸಿದರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ತರಬೇತುದಾರರಾದ ವಿಜಯಲಕ್ಷಿ$್ಮ, ರಜನಿ, ರಾಜಶೇಖರ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕು ಐಸಿಇಒ ಸಂಯೋಜಕ ದೇವರಾಜ ಪತ್ತಾರ ಇತರರಿದ್ದರು.