ಜಿಲ್ಲೆ

ಚಿಕ್ಕಮಗಳೂರಿನಲ್ಲಿ ಸಿಡಿಲು ಬಡಿದು ತಮಿಳುನಾಡು ಮೂಲದ ಮೂವರು ಮಹಿಳೆಯರ ಸಾವು

ಚಿಕ್ಕಮಗಳೂರು: ಸಿಡಿಲು ಬಡಿದು ಮೂವರು ಮಹಿಳೆಯರು ಸಾವಿಗೀಡಾಗಿರುವ ಘಟನೆ ಕಳಸ ಸಮೀಪದ ಬಾಳೆಹೊಳೆಯ ಹಿತ್ತಲಮಕ್ಕಿ ಗ್ರಾಮದಲ್ಲಿ ನಡೆದಿದೆ.

ಜ್ಯೋತಿ(28), ಮಾದಮ್ಮ (65) ಹಾಗೂ ಮಾರಿ (27) ಮೃತರು. ಮೂವರು ಮಹಿಳೆಯರು ತಮಿಳುನಾಡಿನ ಸೇಲಂ ಜಿಲ್ಲೆಯವರು. ಕೂಲಿ ಕೆಲಸಕ್ಕೆಂದು ಚಿಕ್ಕಮಗಳೂರಿಗೆ ಆಗಮಿಸಿದ್ದರು. ಕರೊನಾ ಲಾಕ್​​ಡೌನ್​ನಿಂದಾಗಿ ತವರಿಗೆ ಹಿಂದಿರುಗಲು ಸಾಧ್ಯವಾಗಿರಲಿಲ್ಲ.

ಹಿತ್ತಲಮಕ್ಕಿ ಗ್ರಾಮದ ಕಾಫಿತೋಟದ ಮನೆ ಮುಂಭಾಗದಲ್ಲಿ ನಿಂತಿದ್ದಾಗ ಸಿಡಿಲು ಬಡಿದಿದೆ. ಸ್ಥಳಕ್ಕೆ ಕಳಸ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)