ಮಡಿಕೇರಿ:
ಕೊಡಗಿನ 2ನೇ ಅಣೆಕಟ್ಟೆ ಕುಶಾಲನಗರ ತಾಲೂಕಿನ ಚಿಕ್ಲಿಹೊಳೆ ಜಲಾಶಯ ಈ ಬಾರಿ ಮೇ ತಿಂಗಳಿನಲ್ಲೇ ಭರ್ತಿ ಆಗಿದೆ. ಹಿನ್ನೀರು ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಭಾನುವಾರ ರಾತ್ರಿ ತುಂಬಿರುವ ಜಲಾಶಯದಿಂದ ಸೋಮವಾರ ಕೋಡಿ ಬೀಳುತ್ತಿದೆ. ಕಳೆದ ವರ್ಷ ಜು. 3ಕ್ಕೆ ಅಣೆಕಟ್ಟೆ ತುಂಬಿ ಕೋಡಿ ಹರಿದಿತ್ತು.
ಸಾಮಾನ್ಯವಾಗಿ ಜೂನ್ ಮಧ್ಯ ಭಾಗದ ನಂತರ ಭರ್ತಿ ಆಗುತ್ತಿದ್ದ ಚಿಕ್ಲಿಹೊಳೆ ಜಲಾಶಯ ಕಳೆದ ವರ್ಷ ಆರಿದ್ರಾ ನಕ್ಷತ್ರದ ಮಳೆಯಿಂದಾಗಿ ಜುಲೈ ತಿಂಗಳಿನಲ್ಲಿ ತುಂಬಿ ಕೋಡಿ ಬಿದ್ದಿತ್ತು. ಆದರೆ ಈ ಬಾರಿ ಮೇ ತಿಂಗಳಿನಲ್ಲಿ ಅಬ್ಬರಿಸುತ್ತಿರುವ ರೋಹಿಣಿ ಮಳೆಯಿಂದಾಗಿ ಅವಧಿಗೆ ಮೊದಲೇ ಭರ್ತಿ ಆಗಿದೆ. ವಿಶೇಷ ವಿನ್ಯಾಸದಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟೆ ತುಂಬಿದ್ದು, ಅರ್ಧಚಂದ್ರಾಕÊತಿಯ ಕಟ್ಟೆಯ ಮುಖಾಂತರ ಹೆಚ್ಚುವರಿ ನೀರು ಆಕರ್ಷಕವಾಗಿ ಕೋಡಿ ಬೀಳುತ್ತಿದೆ.
ಕಳೆದ ವರ್ಷ ಮಳೆಯ ಅಭಾವ ಮತ್ತು ಬೇಸಿಗೆಯಲ್ಲಿನ ಬರದ ಸ್ಥಿತಿಯ ಕಾರಣ ಮೇ ತಿಂಗಳಿನಲ್ಲಿ ಜಲಾಶಯ ಖಾಲಿ ಇತ್ತು. ಈ ವರ್ಷ ಬೇಸಿಗೆಯಲ್ಲಿ ಉತ್ತಮ ಮಳೆ ಇದ್ದುದರಿಂದ ಅಲ್ಪ ಪ್ರಮಾಣದಲ್ಲಿ ನೀರು ಉಳಿದುಕೊಂಡಿತ್ತು. ಹಾಗಾಗಿ ಹಿನ್ನೀರು ಪ್ರದೇಶದಲ್ಲಿ ಕಳೆದ 4-5 ದಿನಗಳಿಂದ ಭಾರಿ ಮಳೆಯಾಗುತ್ತಿರುವುದರಿಂದ ಭಾನುವಾರ ರಾತ್ರಿ ವೇಳೆಗೆ ಭರ್ತಿ ಆಗಿ, ಸೋಮವಾರದಿಂದ ಕೋಡಿ ಬೀಳಲಾರಂಭಿಸಿದೆ.
ರಂಗಸಮುದ್ರ, ನಂಜರಾಯಪಟ್ಟಣ, ಹೊಸಪಟ್ಟಣ, ಗುಡ್ಡೆಹೊಸೂರು, ಗೊಂದಿಬಸವನಹಳ್ಳಿ ಸೇರಿದಂತೆ 12 ಗ್ರಾಮಗಳ ವ್ಯಾಪ್ತಿಯ 2,137 ಎಕರೆ ಜಮೀನಿಗೆ ನೀರೊದಗಿಸುವ ಉz್ದೆÃಶದಿಂದ 1977-79ರ ಅವಧಿಯಲ್ಲಿ ಚಿಕ್ಲಿಹೊಳೆ ಜಲಾಶಯ ನಿರ್ಮಿಸಲಾಯಿತು. ಇದಕ್ಕೆ ಯಾವುದೇ ಕ್ರೆಸ್ಟ್ಗೇಟ್ ಇಲ್ಲ. ಜಲಾಶಯ ಭರ್ತಿ ಆದಾಗ ಅರ್ಧಚಂದ್ರಾಕÊತಿಯ ಕಟ್ಟೆಯ ಮುಖಾಂತರ ನೀರು ಹೊರಬಿದ್ದು ನದಿ ಸೇರುತ್ತದೆ. ಕಾಲುವೆಗಳಿಗೆ ನೀರು ಹರಿಸಲು ಮಾತ್ರ ಇಲ್ಲಿ ಗೇಟ್ ವ್ಯವಸ್ಥೆ ಇದೆ.
ಕುಶಾಲನಗರ ತಾಲೂಕು ರಂಗಸಮುದ್ರದಲ್ಲಿ ಇರುವ ಚಿಕ್ಲಿಹೊಳೆ ಜಲಾಶಯ 464.8 ಮೀ. ಉದ್ದವಿದ್ದು. 25.3 ಮೀ. ಎತ್ತರ ಹೊಂದಿದೆ. 0.18 ಟಿಎಂಸಿ ನೀರು ಸಂಗ್ರಹಿಸಬಹುದಾದ ಅಣೆಕಟ್ಟೆಯನ್ನು ಮಣ್ಣು ಮತ್ತು ಕಲ್ಲಿನಿಂದಲೇ ಕಟ್ಟಿರುವುದು ವಿಶೇಷ. ಚಿಕ್ಲಿಹೊಳೆ ತುಂಬಿದಾಗ ಹೊರಹರಿಯುವ ಹೆಚ್ಚುವರಿ ನೀರು ಕಾವೇರಿ ನದಿ ಸೇರುತ್ತದೆ. ಕÊಷಿ ಉz್ದÉÃಶಕ್ಕಾಗಿ ಈ ಅಣೆಕಟ್ಟೆಯನ್ನು ನಿರ್ಮಿಸಲಾಗಿದ್ದರೂ ಇದರ ಗರಿಷ್ಠ ಉಪಯೋಗ ರೈತರಿಗೆ ಆಗುತ್ತಿಲ್ಲ.
1982ರಲ್ಲಿ ಜಲಾಶಯ ಅಧಿಕÊತವಾಗಿ ಕಾರ್ಯಾರಂಭ ಮಾಡಿದೆ. ಆದರೆ ಇಲ್ಲಿಯ ತನಕಯೋಜನೆಯ ಗುರಿ ಹೊಂದಿದ್ದ ಕೊನೆಯ ಪ್ರದೇಶಕ್ಕೆ ನೀರು ತಲುಪಿಸಲು ಸಾಧ್ಯವಾಗಿಲ್ಲ. ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಚಿಕ್ಲಿಹೊಳೆ ಅಣೆಕಟ್ಟೆ ನಿರ್ವಹಣೆ ಹೆಸರಿನಲ್ಲಿ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಹಣ ಇಲ್ಲಿ ಖರ್ಚು ಮಾಡಿರುವುದಾಗಿ ಲೆಕ್ಕ ತೋರಿಸಲಾಗುತ್ತಿದೆ ಎನ್ನುವ ಆರೋಪ ಇದೆ. ಮೇಲ್ನೋಟಕ್ಕೆ ಎದ್ದು ಕಾಣುವಂತೆ ಸುಣ್ಣ-ಬಣ್ಣ ಹೊಡೆಯುವುದನ್ನು ಬಿಟ್ಟರೆ ಬೇರೇನೂ ಕೆಲಸ ಇಲ್ಲಿ ನಡೆಯುವುದಿಲ್ಲ ಎನ್ನುತ್ತಾರೆ ಸ್ಥಳೀಯರು. ಕಾಲುವೆಗಳ ನಿರ್ವಹಣೆಯಲ್ಲಿ ದಿವ್ಯ ನಿರ್ಲಕ್ಷö್ಯ ತೋರಿಸುವುದರಿಂದ ಅಣೆಕಟ್ಟೆ ಪಕ್ಕದಲ್ಲೇ ಇರುವ ರಂಗಸಮುದ್ರ ಗ್ರಾಮದ ಜಮೀನುಗಳಿಗೂ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ.
ಚಿಕ್ಲಿಹೊಳೆಗೆ ಸಂಬAಧಿಸಿದ ಕಚೇರಿಗಳು ರಂಗಸಮುದ್ರದಲ್ಲೇ ಇದ್ದಾಗ ಅಣೆಕಟ್ಟೆ ನಿರ್ವಹಣೆ ಸ್ವಲ್ಪಮಟ್ಟಿಗೆ ಚೆನ್ನಾಗಿಯೇ ಇತ್ತು. ಆದರೆ 2.5 ದಶಕಗಳ ಹಿಂದೆ ಇಲ್ಲಿನ ಆಡಳಿತವನ್ನು ಹಾರಂಗಿ ಯೋಜನೆ ಜತೆ ವಿಲೀನ ಮಾಡಲಾಗಿದ್ದು, ಕಚೇರಿ ಕಟ್ಟಡಗಳು ಪಾಳುಬಿದ್ದವೆ. ಉಸ್ತುವಾರಿ ಹೊತ್ತ ಅಧಿಕಾರಿಗಳು ಕುಶಾಲನಗರ ಸೇರಿಕೊಂಡ ಮೇಲೆ ಜಲಾಶಯ ಅನಾಥವಾಗಿದೆ. ನಿರ್ವಹಣೆಗೆ ವಾರ್ಷಿಕವಾಗಿ ಅನುದಾನಗಳು ಬಿಡುಗಡೆ ಆಗುತ್ತಿರುವ ಬಗ್ಗೆ ದಾಖಲಾತಿಗಳಿದ್ದರೂ ಹಣ ಎಲ್ಲಿಗೆ ಹೋಗುತ್ತಿದೆ ಎನ್ನುವುದು ದೊಡ್ಡ ಪ್ರಶ್ನೆಯಾಗೇ ಉಳಿದಿದೆ ಎನ್ನುತ್ತಾರೆ ಸ್ಥಳೀಯ ರೈತರು.
ಮತ್ತೊಂದು ಕಡೆ ಚಿಕ್ಲಿಹೊಳೆ ಜಲಾಶಯ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳ ಪಟ್ಟಿಯಲ್ಲಿದ್ದರೂ ಪ್ರವಾಸಿಗರನ್ನು ಸೆಳೆಯುವಲ್ಲಿ ಕೂಡ ವಿಫಲವಾಗಿದೆ. ಮೀನುಕೊಲ್ಲಿ ಮೀಸಲು ಅರಣ್ಯಕ್ಕೆ ಹೊಂದಿಕೊAಡAತೆ ಇರುವ ಚಿಕ್ಲಿಹೊಳೆ ಜಲಾಶಯದಲ್ಲಿ ಪ್ರವಾಸೋದ್ಯಮ ಅಭಿವÊದ್ಧಿಗೂ ಬೇಕಾದಷ್ಟು ಅವಕಾಶಗಳಿದೆ. ಕೇರಳದ ಬಾಣಾಸುರ ಅಣೆಕಟ್ಟೆ ಮಾದರಿಯಲ್ಲಿ ಇಲ್ಲಿ ಪ್ರವಾಸಿ ಆಕರ್ಷಣೆಗಳನ್ನು ರೂಪಿಸಬಹುದಾಗಿದ್ದರೂ ಜನಪ್ರತಿನಿಧಿಗಳು ಮತ್ತು ಇಲಾಖೆ ಅಧಿಕಾರಿಗಳಲ್ಲಿ ಆಸಕ್ತಿ, ದೂರದÊಷ್ಟಿ ಕೊರತೆಯಿಂದ ಮಳೆಗಾಲದಲ್ಲಿ ಕೋಡಿ ಬೀಳುವುದನ್ನು ಕಣ್ತುಂಬಿಸಿಕೊಳ್ಳಬಹುದೇ ಹೊರತು ಬೇರೇನೂ ನೋಡುವುದಕ್ಕೆ ಸಿಗುವುದಿಲ್ಲ. ಇಲ್ಲೊಂದು ಸಾಕಾನೆ ಶಿಬಿರ ಆರಂಭಿಸುವ ಯೋಜನೆ ಇತ್ತಾದರೂ ಸ್ಥಳೀಯರ ವಿರೋಧದಿಂದಾಗಿ ಅದು ಹಾರಂಗಿಗೆ ಹೋಗಿದೆ.
ಚಿಕ್ಲಿಹೊಳೆ ಜಲಾಶಯ ಈ ಬಾರಿ ಮೇ ತಿಂಗಳಿನಲ್ಲೇ ಭರ್ತಿಯಾಗಿದ್ದು ಸೋಮವಾರದಿಂದ ಕೋಡಿ ಬೀಳಲಾರಂಭಿಸಿದೆ. ಇದೊಂದು ಅಕರ್ಷಕ ದೃಶ್ಯವಾಗಿದ್ದು, ಇದನ್ನು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ರೈತರ ಕೃಷಿ ಜಮೀನುಗಳಿಗೆ ಅವಶ್ಯಕತೆ ನೋಡಿಕೊಂಡು ನೀರು ಹರಿಸಲಾಗುವುದು. ಜಲಾಶಯವನ್ನು ರೈತ ಸ್ನೇಹಿಯಾಗಿ ರೂಪಿಸಲು ಹಾಗೂ ಪ್ರವಾಸಿ ತಾಣವಾಗಿ ಆಕರ್ಷಣೆ ಹೆಚ್ಚಿಸುವ ಯೋಜನೆ ಬಗ್ಗೆ ಹಿರಿಯ ಅಧಿಕಾರಿಗಳಲ್ಲಿ ಚರ್ಚೆ ನಡೆದಿದೆ.
ಡಿ.ಡಿ. ಕಿರಣ್, ಉಸ್ತುವಾರಿ ಅಭಿಯಂತರ, ಚಿಕ್ಲಿಹೊಳೆ ಜಲಾಶಯ
ಚಿಕ್ಲಿಹೊಳೆ ಜಲಾಶಯ ಒಂದು ಕಡೆ ರೈತರಿಗೂ ಪ್ರಯೋಜನ ಆಗುತ್ತಿಲ್ಲ. ಮತ್ತೊಂದು ಕಡೆ ಪ್ರವಾಸಿತಾಣವಾಗಿಯೂ ಅಭಿವೃದ್ಧಿ ಆಗುತ್ತಿಲ್ಲ. ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಇಲ್ಲಿಯ ನೀರು ರೈತರ ಜಮೀನುಗಳಿಗೆ ಹರಿಯುತ್ತಿಲ್ಲ. ಜಮೀನಿಗೆ ನೀರು ಬರುವುದಿಲ್ಲ ಎಂದು ಬೇಸತ್ತು ರೈತರು ಭತ್ತ ಬೆಳೆಯುವ ಭೂಮಿಯಲ್ಲಿ ಅಡಿಕೆ ತೋಟ ಮಾಡಿದ್ದಾರೆ. ಕೆಲವು ಕೃಷಿಕರು ತಮ್ಮ ಭೂಮಿಯನ್ನು ಬಡಾವಣೆಗಳಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿದ್ದಾರೆ.
ಸಿ.ಎಲ್. ವಿಶ್ವ, ಅಧ್ಯಕ್ಷ, ನಂಜರಾಯಪಟ್ಟಣ ಗ್ರಾ.ಪಂ.