ಜಿಲ್ಲೆ

ಹಸಿರಿಗೆ ಉಸಿರು ತುಂಬುತ್ತಿರುವ ಸಂಸ್ಥೆ!

ಮಂಜುನಾಥ ಗದಗಿನ

ವಿಜಯವಾಣಿ ವಿಶೇಷ ಚಿಕ್ಕೋಡಿ

ಸರ್ಕಾರ ಪರಿಸರ ಸಂರಕ್ಷಣೆಗೆ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮುಂದುವರೆದಿರುವುದು ಕಳವಳಕಾರಿ ಸಂಗತಿ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಪರಿಸರ ಉಳಿಸಲು, ಬೆಳೆಸಲು ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಇದರ ಜತೆಗೆ ಸಂಘ ಸಂಸ್ಥೆಗಳು ಸಹ ಅರಣ್ಯ ಬೆಳೆಸುವ ಕಾರ್ಯದಲ್ಲಿ ತೊಡಗಿವೆ. ಈ ಸಾಲಿನಲ್ಲಿ ಚಿಕ್ಕೋಡಿ ಮೌಂಟೇನ್ ಮೆಜೆಸ್ಟಿ ಸಂಸ್ಥೆ ಒಂದು ಹೆಜ್ಜೆ ಮುಂದಿದೆ.

ಪ್ರಚಾರಕ್ಕೆ ಒಂದೆರಡು ಸಸಿ ನೆಟ್ಟು ಪ್ರಚಾರ ಪಡೆಯುವವರ ಮಧ್ಯೆ ಚಿಕ್ಕೋಡಿ ಮೌಂಟೇನ್ ಮೆಜೆಸ್ಟಿ ಸಂಸ್ಥೆ 400 ಎಕರೆ ಗುಡ್ಡಗಾಡು ಪ್ರದೇಶದಲ್ಲಿ ಎರಡು ವರ್ಷದಿಂದ 18 ಸಾವಿರ ಸಸಿ ಪಾಲನೆ ಪೋಷಣೆ ಮಾಡುವ ಮೂಲಕ ಹಸಿರು ಕ್ರಾಂತಿಗೆ ಮುನ್ನಡೆ ಬರೆದಿದೆ.

ನಿರಂತರ ಪೋಷಣೆ: ಅರಣ್ಯ ಇಲಾಖೆಯಿಂದ ನೆಟ್ಟಿದ್ದ ಸಸಿಗಳಿಗೆ ನೀರುಣಿಸುವುದು ಸಾಹಸ ಕೆಲಸವಾಗಿತ್ತು. ಇಂತಹ ಸಂದರ್ಭದಲ್ಲಿ ಮೌಂಟೇನ್ ಮೆಜೆಸ್ಟಿ ಸಂಸ್ಥೆ ಸ್ವಂತ ಕೊಳವೆ ಬಾವಿ ಕೊರೆಯಿಸಿ ಹದಗೆಟ್ಟ ರಸ್ತೆ ಮಧ್ಯೆಯೇ ಕಳೆದ ಎರಡು ವರ್ಷಗಳಿಂದ ಸಸಿಗಳಿಗೆ ನೀರುಣಿಸುತ್ತಿದೆ. ಇದು ಸಂಸ್ಥೆಯ ಪರಿಸರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ.

25 ಸಾವಿರ ಸಸಿ ನೆಡುವ ಗುರಿ: ಅಂತರ್ಜಲಮಟ್ಟ ಹೆಚ್ಚಿಸುವುದು ಹಾಗೂ ವಾತಾವರಣದಲ್ಲಿನ ಉಷ್ಣಾಂಶ ನಿಯಂತ್ರಣದ ದೃಷ್ಟಿಯಿಂದ ಅರಣ್ಯೀಕರಣ ಮಾಡುವ ಉದ್ದೇಶ ತಂಡದ್ದಾಗಿದೆ. ಮುಂದಿನ ದಿನಗಳಲ್ಲಿ ಚಿಕ್ಕೋಡಿ ಸುತ್ತಲಿನ ಪರಿಸರದಲ್ಲಿ 25 ಸಾವಿರ ಸಸಿ ನೆಡುವ ಗುರಿಯನ್ನು ಮೌಂಟೇನ್ ಮೆಜೆಸ್ಟಿ ಸಂಸ್ಥೆ ಹೊಂದಿದೆ.

ಪರಿಸರದ ಮೇಲೆ ಅಪಾರ ಪ್ರೀತಿ, ಕಾಳಜಿ ಇರುವ ಚಿಕ್ಕೋಡಿ ಪಟ್ಟಣದಲ್ಲಿನ ವೈದ್ಯರು, ವಕೀಲರು, ಉದ್ಯಮಿಗಳು ಹಾಗೂ ಪರಿಸರ ಪ್ರೇಮಿಗಳು ಮೌಂಟೆನ್ ಮೆಜೆಸ್ಟಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಅನುಭವಸಥರ ದಂಡೇ ಇರುವ ಕಾರಣಕ್ಕೆ ಯೋಜನಾಬದ್ಧವಾಗಿ ಪರಿಸರ ರಕ್ಷಣೆಗೆ ಕಾರ್ಯಗಳನ್ನು ಹಾಕಿಕೊಂಡು ಇತರರಿಗೂ ಮಾದರಿಯಾಗಿದ್ದಾರೆ.

ಅಂತರ್ಜಲಮಟ್ಟ ಹೆಚ್ಚಿಸುವ ಹಾಗೂ ವಾತಾವರಣದಲ್ಲಾಗುತ್ತಿರುವ ಹವಾಮಾನದ ವೈಪರೀತ್ಯ ಗಮನಿಸಿ ನಮ್ಮ ತಂಡ ಸಸಿ ನೆಡುವ ಹಾಗೂ ಅವುಗಳನ್ನು ಪೋಷಿಸುವ ಕಾರ್ಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇನಷ್ಟು ಪರಿಸರ ಸಂರಕ್ಷಣೆ ಕಾರ್ಯ ಕೈಗೊಳ್ಳಲಾಗುವುದು. ಸಂಜಯ ಚೌಗಲಾ, ಸಂಸ್ಥೆ ಕಾರ್ಯದರ್ಶಿ ಪರಿಸರ ಸಂರಕ್ಷಣೆಗೆ ಸರ್ಕಾರದ ಜತೆಗೆ ಚಿಕ್ಕೋಡಿ ಮೌಂಟೆನ್ ಮೆಜಸ್ಟಿ ಸಂಸ್ಥೆ ಕೈಜೋಡಿಸಿದೆ. ಸಸಿಗಳಿಗೆ ನೀರುಣಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಸಂಸ್ಥೆ ಸಾಮಾಜಿಕ ಕಾರ್ಯ ಮುಂದುವರೆಯಲಿ. ಪರಿಸರ ಸಂರಕ್ಷಣೆ ಪಣ ತೊಟ್ಟಿರುವ ಸಂಸ್ಥೆ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ. ಜಗದೀಶ ರಕ್ಕಸಗಿ ಅರಣ್ಯವಲಯ ಅಧಿಕಾರಿ, ಚಿಕ್ಕೋಡಿ --- 4ಆನಂದ2 ಚಿಕ್ಕೋಡಿ ಹೊರವಲಯದ ಅರಣ್ಯ ಉಪ ವಲಯದಲ್ಲಿ ಸಸಿಗಳಿಗೆ ಮೌಂಟೆನ್ ಮೆಜಸ್ಟಿ ಸಂಸ್ಥೆಯಿಂದ ಟ್ಯಾಂಕರ್ ಮೂಲಕ ನೀರುಣಿಸುತ್ತಿರುವುದು. ಪೋಟೊ:4ಆನಂದ2ಎ (ಸಂಜಯ ಚೌಗಲಾ) ಪೋಟೊ:4ಆನಂದ2ಬಿ ( ಜಗದೀಶ ರಕ್ಕಸಗಿ)